‘ಮೀಟರ್’ಗಿಂತ ಹೆಚ್ಚು ಹಣ ಕೇಳಂಗಿಲ್ಲ, ಕರ್ಕಶ ಶಬ್ದ, ವೀಲಿಂಗ್ ಮಾಡಿದರೆ ಫೋಟೊ ತೆಗೆದು ಕಳುಹಿಸಿ’

 SHIVAMOGGA LIVE NEWS 

SHIMOGA | ಆಟೋಗಳಲ್ಲಿ ಮೀಟರ್ ಬಳಕೆ ಕಡ್ಡಾಯ. ಪ್ರಯಾಣಿಕರಿಂದ ಹೆಚ್ಚಿಗೆ ಹಣ ಕೇಳುವಂತಿಲ್ಲ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಉಪಯೋಗಿಸಿದರೆ ಕ್ರಮ. ಇದು ಜಿಂಟಿ ಸಾರಿಗೆ ಆಯುಕ್ತೆ ಎನ್.ಜಿ.ಗಾಯತ್ರಿದೇವಿ ಅವರ ಖಡಕ್ ಎಚ್ಚರಿಕೆ.

TODAY NEWS PARAGRAPH

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಜಂಟಿ ಸಾರಿಗೆ ಆಯಕ್ತೆ ಎನ್.ಜಿ.ಗಾಯತ್ರಿದೇವಿ ನೀಡಿದ ಖಡಕ್ ಎಚ್ಚರಿಕೆಗಳು. ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಾರ್ವಜನಿಕರ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಂಟಿ ಆಯುಕ್ತೆ ಗಾಯತ್ರಿದೇವಿ ಅವರು ವಿವಿಧ ಕೆಲವು ಖಡಕ್ ಸೂಚನೆಗಳನ್ನು ನೀಡಿದರು.

Kalleshwara-Enterprises.webp

ಏನೇನೆಲ್ಲ ಸೂಚನೆ ನೀಡಲಾಯಿತು

ಸೂಚನೆ 1 – ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಮೀಟರ್ ಬಳಕೆ ಕೂಡ ಕಡ್ಡಾಯವಾಗಿದೆ. ಮೀಟರ್’ಗಿಂತಲೂ ಹೆಚ್ಚಿಗೆ ಹಣ ಕೇಳಿದರೆ ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಪ್ರೀ ಪೇಯ್ಡ್ ಕೌಂಟರ್’ಗಳನ್ನು ತೆರೆಯುವ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ.

ಸೂಚನೆ 2 – ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ನಿಗದಿಗಿಂತಲೂ ಹೆಚ್ಚು ಮಂದಿಯನ್ನು ಕರೆದೊಯ್ಯುವಂತಿಲ್ಲ. ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ.

RTO Meeting in Shimoga

ಸೂಚನೆ 3 – ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಶಬ್ದ ಮಾಲಿನ್ಯ ಉಂಟು ಮಾಡುವ ಸೈಲೆನ್ಸರ್ ಬಳಕೆ ನಿಷೇಧವಿದೆ. ವೀಲಿಂಗ್ ಮಾಡುವಂತಿಲ್ಲ. ಒಂದು ವೇಳೆ ಕರ್ಕಶ ಶಬ್ದದ ಸೈಲೆನ್ಸರ್ ಬಳಸಿದರೆ, ವೀಲಿಂಗ್ ಮಾಡುತ್ತಿದ್ದರೆ ಸಾರ್ವಜನಿಕರು ವಿಡಿಯೊ, ಫೋಟೊ ತೆಗೆದು ಕಳುಹಿಸಬಹುದಾಗಿದೆ. ಅಂತಹ ವಾಹನ ಸವಾರರ ವಿರುದ್ಧ ಕ್ರಮವಾಗಲಿದೆ.

ಸೂಚನೆ 4 – ವಾಹನಗಳ ರಿಜಿಸ್ಟ್ರೇಷನ್, ಲೈಸೆನ್ಸ್, ಎಲ್.ಎಲ್.ಆರ್ ಮಾಡಿಸಲು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ವಿಶೇಷ ಚೇತರು ಸರ್ಟಿಫಿಕೇಟ್ ಜೊತೆಗೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು.

ಸೂಚನೆ 5 – ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗುತ್ತದೆ. ರಸ್ತೆ ಸುರಕ್ಷತೆ ಕುರಿತು ತಿಂಗಳಿಗೆ ಎರಡು ಸಭೆ ನಡೆಸಲಾಗುತ್ತದೆ.

ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರಿಗೆ ಪ್ರಾದೇಶಿಕ ಅಧಿಕಾರಿ ಜಿ.ಪಿ.ಗಂಗಾಧರ, ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಎಂ ಮಲ್ಲೇಶಪ್ಪ, ಅಧೀಕ್ಷಕರು, ಸಾರ್ವಜನಿಕರೂ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Shimoga Nanjappa Hospital

ದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಹಾದಿಯಲ್ಲಿ ರೂಟ್ ಮಾರ್ಚ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment