ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 JANUARY 2024
SHIMOGA : ಹಣ ಕೊಟ್ಟು ಜೇಬು ತುಂಬಿಸುವುದು ಗ್ಯಾರಂಟಿ ಯೋಜನೆಗಳ ಉದ್ದೇಶವಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಉಲ್ಬಣಿಸಿರುವ ಸಂದರ್ಭ ಪ್ರತಿ ಕುಟುಂಬದಲ್ಲಿ ಆತ್ಮಬಲ ತುಂಬುವುದು ಈ ಯೋಜನೆಗಳ ಧ್ಯೇಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಡಿಕೆಶಿ ಭಾಷಣದ 3 ಪಾಯಿಂಟ್
ನಗರದ ಫ್ರೀಡಂ ಪಾರ್ಕ್ನಲ್ಲಿ ಯುವನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಿರುದ್ಯೋಗಿಗಳು ಉದ್ಯೋಗಿಗಳಾಗಿ, ಬಳಿಕ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗಗಳನು ಸೃಷ್ಟಿಸಬೇಕು. ಇದು ಯುವ ನಿಧಿ ಯೋಜನೆಯ ಪ್ರಮುಖ ಧ್ಯೇಯ. ಅದ್ದರಿಂದ ಯುವನಿಧಿ ಯೋಜನೆಯ ಪ್ರತಿ ಫಲಾನುಭವಿ ಉದ್ಯೋಗ ಸೃಷ್ಟಿ ಮಾಡಿದರೆ ಯೋಜನೆ ಸಾರ್ಥಕ್ಯ ಪಡೆಯಲಿದೆ.
ಚುನಾವಣೆ ಸಂದರ್ಭ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡು ರಾಜ್ಯ ಸರ್ಕಾರ ದೇಶದಲ್ಲೇ ಮಾದರಿಯಾಗಿದೆ. ಗೃಹ ಜ್ಯೋತಿ ಯೋಜನೆ ಮೂಲಕ ಒಂದೂವರೆ ಕೋಟಿ ಮನೆಗಳನ್ನು ಬೆಳಗುತ್ತಿದ್ದೇವೆ. ಯಜಮಾನಿಗೆ 2 ಸಾವಿರ ರೂ., ಅನ್ನಭಾಗ್ಯಕ್ಕೆ ಅಕ್ಕಿ ಸಿಗದ ಹಿನ್ನೆಲೆ ನಗದು ವರ್ಗಾವಣೆ, ಪ್ರತಿ ದಿನ 60 ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ವಿವಿಧೆಡೆ ಹೊಟೇಲ್, ಅಂಗಡಿಗಳಲ್ಲಿ ವ್ಯಾಪಾರ ಚನ್ನಾಗಿ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಯೋಜನೆಯಿಂದ ಏನೇನೆಲ್ಲ ಲಾಭವಿದೆ? ಇಲ್ಲಿದೆ ಸಿಎಂ ಹೇಳಿದ 4 ಪಾಯಿಂಟ್
ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರು ಯುವಕರಿಗಾಗಿ ಯೋಜನೆ ರೂಪಿಸಿದ್ದರು. ಈಗ ಯುವನಿಧಿ ಕೂಡ ಅಂತಹುದೆ ಯೋಜನೆ. ಐದನೆ ಪ್ರಮುಖ ಗ್ಯಾರಂಟಿಯಾದ ಯುವನಿಧಿ ಜಾರಿಗೆ ಬಂದಿದೆ. ಯುವಕರ ಕೌಶಲ್ಯಾಭಿವೃದ್ಧಿ ಮಾಡಿ ಉದ್ಯೋಗ ಸೃಷ್ಟಿ ಯೋಜನೆಯ ಗುರಿ. ಕಾಂಗ್ರೆಸ್ ಸರ್ಕಾರ ಯುವಕರ ಜೊತೆಗಿದೆ. ಯುವಕರು ಸಾಧನೆ ಮಾಡುವಂತ ಗಮನ ಹರಿಸಬೇಕು. ಸಾಧನೆ ಇಲ್ಲದೆ ಸತ್ತರ ಸಾವಿನ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422