ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿ ಸಂಘದ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಫೋಟೋವನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ. ಇದರಿಂದ ಅವರ ಘನತೆಗೆ ಕುಂದುಂಟಾಗಿದೆ. ಭರತ್ ರಾಜ್ ಪೂಜಾರಿ, ರಾಹುಲ್ ರೌನ್ಸಿವಿನ್ಸಿ ಹಾಗೂ ಕೃಷ್ಣಮೂರ್ತಿ ಹೆಗಡೆ ಎಂಬುವವರು ಫೇಸ್’ಬುಕ್’ನಲ್ಲಿ ಅಡ್ಮಿನ್ ಆಗಿರುವ ‘ಭೀಮಾ ತೀರದಲ್ಲಿ’ ಎಂಬ ಗ್ರೂಪ್ನಲ್ಲಿ ಡಿ.ಕೆ.ಶಿವಕುಮಾರ್ ಅವರ ರಾಮನಗರದ ಮೂಳೆ ಸ್ವಾಮಿ ಅಲೆಲ್ಯೂಯಾ ರಾಮನಗರದ ಮೂಳೆ ಸ್ವಾಮಿಗೆ ಜೈ ಎಂಬ ಶೀರ್ಷಿಕೆಯಡಿ ಏಸು ಕ್ರಿಸ್ತರ ಬೆತ್ತಲೆ ಚಿತ್ರಕ್ಕೆ ಶಿವಕುಮಾರ್ ಅವರ ಮುಖವನ್ನು ಅಂಟಿಸುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವರನ್ನು ಅವಮಾನಗೊಳಿಸಿದ್ದಲ್ಲದೆ, ಅವರ ಅಭಿಮಾನಿಗಳ ಮನಸ್ಸಿಗೂ ಘಾಸಿ ಮಾಡಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಆರ್.ಮೋಹನ್, ಶ್ಯಾಮ್ ಸುಂದರ್, ದಿನೇಶ್ ರಾವ್, ಸ್ಟೆಲ್ ಮಾರ್ಟಿನ್, ಗಣೇಶ್ ಚಿಕ್ಕಮರಡಿ, ಸಂದೀಪ್, ನಳಿನ ದಾಮೋದರ್, ರಮೇಶ್ ಹೆಗ್ಡೆ, ಪ್ರವೀಣ್ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422