ಗೌರಿ ಇನ್ನಿಲ್ಲ, ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ಗೌರವ ನಮನ, ಯಾರಿದು ಗೌರಿ? ಈಕೆಯ ಹಿರಿಮೆ ಏನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 10 MAY 2023

SHIMOGA : ಪೊಲೀಸ್‌ ಇಲಾಖೆಯ ಅಪರಾಧ ಪತ್ತೆ ದಳದ ಪ್ರಮುಖ ಶ್ವಾನ (Dog Squad) ಗೌರಿ ಕೊನೆಯುಸಿರೆಳೆದಿದೆ. ಅನಾರೋಗ್ಯ ಹಿನ್ನೆಲೆ ಇವತ್ತು ಬೆಳಗ್ಗೆ ಗೌರಿ ಸಾವನ್ನಪ್ಪಿದೆ. ಸರ್ಕಾರಿ ಗೌರವದೊಂದಿಗೆ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Police-Dog-Squad-Gowri-Dies

ಶಿವಮೊಗ್ಗದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಗೌರಿ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಗೌರಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ – ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು ಮೀಟರ್‌ ದೂರ ಉಳಿದ ಜನ

ಪೊಲೀಸ್‌ ಇಲಾಖೆಯ ಪ್ರಮುಖ ಶ್ವಾನ

ಜಿಲ್ಲಾ ಪೊಲೀಸ್‌ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ಗೌರಿ ಪ್ರಮುಖ ಸ್ಥಾನ ಹೊಂದಿತ್ತು.

Gowri Police Dog Squad Dog

2012ರ ಆಗಸ್ಟ್‌ 3ರಂದು ಜನಿಸಿದ್ದ ಗೌರಿ, 2013ರ ಆಗಸ್ಟ್‌ 28ರಂದು ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿತ್ತು. ಆ ಬಳಿಕ 312 ಅಪರಾಧ ಪತ್ತೆ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ಪೈಕಿ 36 ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಸುಳಿವು ನೀಡಿತ್ತು. ಅಡಕೆ ಮತ್ತು ಮನೆ ಕಳ್ಳತನ ಪ್ರಕರಣದಲ್ಲಿ ಗೌರಿ ಸುಳಿವು ನೀಡಿತ್ತು. ಪೊಲೀಸ್‌ ಸಿಬ್ಬಂದಿ ಸಿ.ಲೋಕೇಶ್‌ ಅವರು ಗೌರಿಯ ನಿರ್ವಾಹಕರಾಗಿದ್ದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಜನ ಮನ ಗೆದ್ದಿದ್ದ ಗೌರಿ

ಶಿವಮೊಗ್ಗ ನಗರದಲ್ಲಿ ನಡೆಯುತ್ತಿದ್ದ ‍‍ಶ್ವಾನ (Dog Squad) ಪ್ರದರ್ಶನದಲ್ಲಿ ಗೌರಿ ಭಾಗವಹಿಸಿ, ಜನರ ಮನಸು ಗೆದ್ದಿತ್ತು. ಅಪರಾಧ ಪತ್ತೆ ಪ್ರಾತ್ಯಕ್ಷಿಕೆ ನೀಡಿ, ಎಲ್ಲರಿಂದಲು ಪ್ರಶಂಸೆ ಪಡೆದಿತ್ತು. ಅತ್ಯಂತ ಸ್ನೇಹ ಜೀವಿಯಾಗಿದ್ದ ಗೌರಿ, ತುಂಬಾ ತೀಕ್ಷ್ಣಮತಿಯಾಗಿತ್ತು. ಇದೇ ಕಾರಣಕ್ಕೆ ಪೊಲೀಸ್‌ ಇಲಾಖೆಯಲ್ಲಿ ಗೌರಿ ಎಲ್ಲರ ಅಚ್ಚುಮೆಚ್ಚಿನ ಶ್ವಾನವಾಗಿತ್ತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment