ಶಿವಮೊಗ್ಗ ರಂಗ ದಸರಾ, ಯಾವ್ಯಾವ ನಾಟಕ ಯಾವಾಗ ಪ್ರದರ್ಶನ ಆಗಲಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಮಹಾನಗರ ಪಾಲಿಕೆಯ ಶಿವಮೊಗ್ಗ ದಸರಾದ ಅಂಗವಾಗಿ ಆಯೋಜಿಸಿರುವ ರಂಗ ದಸರಾವನ್ನು ಸೆ.24ರಂದು ಬೆಳಗ್ಗೆ 10.30ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗ (Drama) ನಿರ್ದೇಶಕ ಗಣೇಶ್ ಮಂದಾರ್ತಿ ಉದ್ಘಾಟನೆ ಮಾಡಲಿದ್ದಾರೆ ಎಂದು ಕಲಾವಿದರು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ತಿಳಿಸಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂತೇಶ ಕದರಮಂಡಲಗಿ, ಸೆ.24ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಬಾರಮ್ಮ ಭಾಗೀರಥಿ, ದತ್ತೋಪಂತದ ಪತ್ತೇದಾರಿ, ಎದೆಯ ಹಣತೆ ನಾಟಕಗಳು ಪ್ರದರ್ಶನವಾಗಲಿವೆ ಎಂದರು. ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ. 

DASARA-NEWS-LOGO-1ಸೆ.25 ರಿಂದ 27ರ ವರೆಗೆ ನಗರದ 12 ಕಾಲೇಜುಗಳ ವಿದ್ಯಾರ್ಥಿಗಳು ಪ್ರಮುಖ ಸ್ಥಳಗಳಲ್ಲಿ ಬೀದಿ ನಾಟಕ ಪ್ರದರ್ಶನ ನೀಡಲಿದ್ದಾರೆ. ಜತೆಗೆ ರಂಗ ಉಪನ್ಯಾಸ, ರಂಗಗೀತೆಯನ್ನು ಆಯೋಜಿಸಿದೆ. ಕುಟುಂಬ ರಂಗದಲ್ಲಿ 16 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಆಯ್ಕೆಯಾದ ನಾಲ್ಕು ತಂಡಗಳು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನ ನೀಡಲಿವೆ ಎಂದರು.

ಸೆ.26ರಿಂದ ಕುವೆಂಪು ರಂಗಮಂದಿರದಲ್ಲಿ ರಂಗ ಪರಿಕರ ಪ್ರದರ್ಶನ ಪ್ರಾರಂಭವಾಗಲಿದ್ದು, ಒಂದು ವಾರ ನಡೆಯಲಿದೆ ಎಂದು ತಿಳಿಸಿದರು.

230925 Ranga Dasara in Shimoga

ಸಮಾಜದ ಎಲ್ಲರಲ್ಲೂ ನಾಟಕದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವನ್ನು ಸಂಘ ಹೊಂದಿದೆ. ಕುವೆಂಪು ರಂಗಮಂದಿರದಲ್ಲಿ ಸೆಲ್ಫಿ ರಂಗ ಹೆಸರಿನಲ್ಲಿ ಸೆಲ್ಫಿ ಬೂತ್‌ನ್ನು ಅಳವಡಿಸಲಾಗುವುದು. 30 ತಂಡಗಳ 300ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಇದು ಜಿಲ್ಲೆಯ ರಂಗಭೂಮಿಯಲ್ಲೆ ಮೊದಲ ಪ್ರಯತ್ನ.

  • ಹೊನ್ನಾಳಿ ಚಂದ್ರಶೇಖರ್, ಸಂಘದ ಪ್ರಧಾನ ಕಾರ್ಯದರ್ಶಿ

RED-LINE-

ಸೆ.30ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 7.15ಕ್ಕೆ ರಂಗ ದಸರಾ ಸಮಾರೋಪ ಹಮ್ಮಿಕೊಂಡಿದ್ದು, ಕಲಾವಿದ ಪ್ರಕಾಶ್ ರಾವ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ » ಎರಡು ಬ್ಯಾಂಕ್‌ಗಳಲ್ಲಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿದಾಗ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಬಿಗ್‌ ಶಾಕ್‌

ಸುದ್ದಿಗೋಷ್ಠಿಯಲ್ಲಿ ಹಾಲಸ್ವಾಮಿ, ಮಂಜುನಾಥ್, ಮಧುನಾಯ್ಕ, ಎನ್.ಚಂದನ್, ಸುರೇಶ್ ಮತ್ತಿತರರಿದ್ದರು.

JNNCE-Admission-Advt-scaled

Drama festival in shimoga dasara

Leave a Comment