ಶಿವಮೊಗ್ಗದಲ್ಲಿ ನಾಟಕೋತ್ಸವಕ್ಕೆ ಚಾಲನೆ, ಹೇಗಿತ್ತು ಮಾಯಾ ದ್ವೀಪ? ಇವತ್ತು ಯಾವ ನಾಟಕ ಇರಲಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ರಂಗಾಯಣ, ಸಮುದಾಯ ಸಂಯುಕ್ತ ಆಶ್ರಯದಲ್ಲಿ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ನೆನಪಿನಲ್ಲಿ ಅಯೋಜಿಸಿರುವ ನಾಟಕೋತ್ಸವಕ್ಕೆ (Drama Festival) ಕುವೆಂಪು ರಂಗಮಂದಿರದಲ್ಲಿ ಶಾಸಕ ಎಸ್‌.ಎನ್.ಚನ್ನಬಸಪ್ಪ ಚಾಲನೆ ನೀಡಿದರು.

‘ರಂಗಭೂಮಿ ಒನ್‌ ಸೈಡ್‌ ಆಗಬಾರದು’

ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ರಂಗಭೂಮಿ ಜೀವನ ರೂಪಿಸುವ ವೇದಿಕೆ. ನಾಟಕದ ರೂಪಕ, ದೃಶ್ಯಗಳು ಜೀವನಕ್ಕೆ ಹತ್ತಿರವಾದದ್ದು. ಪ್ರೇಕ್ಷಕ ನಾಟಕಗಳ ಮೂಲಕ ಜೀವನಕ್ಕೆ ಬೇಕಾದದ್ದನ್ನು ಅಳವಡಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈಗಲೂ ರಂಗಭೂಮಿ ಪ್ರಸ್ತುತ ಎನಿಸಿದೆ. ಶಿವಮೊಗ್ಗ ಜಿಲ್ಲೆ ಕಲೆ, ಸಂಸ್ಕೃತಿಗೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು.

ನಾಟಕಗಳು ಪ್ರೇಕ್ಷಕರಿಗೆ ಪ್ರೇರಣದಾಯಿ ಆಗಬೇಕು. ರಂಗಭೂಮಿ ಒನ್ ಸೈಡ್ ಆಗಬಾರದು. ನಾಟಕಗಳು ಎಡಪಂಥೀಯ ವಾದಕ್ಕೆ ಮನ್ನಣೆ ನೀಡುತ್ತಿವೆ. ಒನ್‌ ಸೈಡ್‌ ಆಗದಿದ್ದರೆ ರಂಗಭೂಮಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿದೆ. ನಾಟಕಗಳು ಜನರಿಗೆ ಹತ್ತಿರವಾಗಬೇಕು. ಆಗ ರಂಗಮಂದಿರಗಳು ಭರ್ತಿ ಆಗಲಿವೆ ಎಂದು ತಿಳಿಸಿದರು.

ಹಲವು ಚಳವಳಿಗಳು ಒಡೆದು ಹೋಳಾದವು. ಆದರೆ ಸಮುದಾಯ ಚಳವಳಿ ಇನ್ನೂ ಗಟ್ಟಿಯಾಗಿದೆ‌. ಅದಕ್ಕೆ ಕಾರಣ ನಿಸ್ವಾರ್ಥ ಕಲಾವಿದರು. ಹಾಗಾಗಿಯೆ ಸಮುದಾಯದ 50ನೇ ವರ್ಷಾಚಾರಣೆಯಲ್ಲಿದ್ದೇವೆ.

  • ನಾಗರಾಜ ಮೂರ್ತಿ, ನಾಟಕ ಅಕಾಡೆಮಿ ಅಧ್ಯಕ್ಷ

RED-LINE-

ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ರವೀಂದ್ರನಾಥ ಸಿರಿವರ, ರಿಜಿಸ್ಟ್ರಾರ್‌ ಬಿ. ನೀಲಮ್ಮ, ಜಿಲ್ಲಾ ಸಂಚಾಲಕ ಡಾ. ಗಣೇಶ ಕೆಂಚನಾಲ, ಸಮುದಾಯದ ಗೌರವಾಧ್ಯಕ್ಷ ಜನಾರ್ದನ್‌, ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ಚಿಕ್ಕಮಗಳೂರು, ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು.  

ಪ್ರೇಕ್ಷಕರ ಮನಗೆದ್ದ ಮಾಯಾ ದ್ವೀಪ

ನಾಟಕೋತ್ಸವದ ಮೊದಲ ದಿನ ಬೆಂಗಳೂರಿನ ನೆನಪು ಕಲ್ಚರಲ್‌ ಅಂಡ್‌ ಎಜುಕೇಷನಲ್‌ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಮಾಯಾ ದ್ವೀಪ ನಾಟಕ ಪ್ರದರ್ಶಿಸಲಾಯಿತು. ಷೇಕ್ಸ್‌ಪಿಯರ್‌ನ ದಿ ಟೆಂಪೆಸ್ಟ್‌ ಆಧರಿಸಿ ಪುನೀತ್‌ ಕರ್ತ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. (ಇಲ್ಲಿವೆ ಫೋಟೊಗಳು )

ರಂಗ ವಿನ್ಯಾಸ, ಬೆಳಕು, ಸಂಗೀತ ಮತ್ತು ಅಭಿನಯ ಪ್ರೇಕ್ಷಕರಿಗೆ ಹಿಡಿಸಿತು. ಅಲ್ಲಲ್ಲಿ ಕೆಲವು ಸನ್ನಿವೇಶಗಳು ‘ಟೈಮ್‌ ಕಿಲ್‌ʼ ಮಾಡಿತೇನೋ ಎಂದೆನಿಸಿದರು, ಪ್ರೇಕ್ಷಕರ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಕೊನೆಯವರೆಗು ಕುತೂಹಲ ಉಳಿಸಿಕೊಂಡೆ ನಾಟಕ ಸಾಗಲಿದೆ. ಹಾಸ್ಯ, ಚಮತ್ಕಾರ, ಗುದ್ದೆಗೆಯ ಲಾಲಸೆ, ಪ್ರೇಮಿಗಳ ತವಕ ಕೊನೆಯ ಕ್ಷಣದ ತನಕ ಪ್ರೇಕ್ಷಕರನ್ನು ರಂಜಿಸಿದವು.

ಇಂದು ಸಂಜೆ 7 ಗಂಟೆಗೆ ಸಫ್ದರ್‌ ಹಾಶ್ಮಿ ಬದುಕು – ಕಥೆ ಆಧಾರಿತ ನೀರೊಳಗಣ ಕಿಚ್ಚು     ನಾಟಕ ಪ್ರದರ್ಶನ ಆಗಲಿದೆ. ಡಾ. ಸಾಸ್ವೆಹಳ್ಳಿ ಸತೀಶ್‌ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ » ಇಂದು ಉಚಿತವಾಗಿ ಹೃದಯ ತಪಾಸಣಾ ಶಿಬಿರ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment