ಶಿವಮೊಗ್ಗ ಲೈವ್.ಕಾಂ | SHIMOGA NEWS | 30 NOVEMBER 2020
ಕರೋನ, ಲಾಕ್‍ಡೌನ್ ಹಿನ್ನೆಲೆ ಸ್ಥಗಿತವಾಗಿದ್ದ ರಂಗ ಚಟುವಟಿಕೆ ಶಿವಮೊಗ್ಗದಲ್ಲಿ ಪುನಾರಂಭವಾಗಿದೆ. ಎಂಟು ತಿಂಗಳ ಬಳಿಕ ಮೊದಲ ನಾಟಕ ಪ್ರದರ್ಶನಕ್ಕೆ ರಂಗಾಸಕ್ತರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
![]() |
ಯಾವುದು ಮೊದಲ ನಾಟಕ?
ಶಿವಮೊಗ್ಗ ರಂಗಾಯಣ ಸಭಾಂಗಣದಲ್ಲಿ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನವಾಯಿತು. ವೆಂಕಟರಮಣ ಐತಾಳ್ ಅವರು ನಿರ್ದೇಶಿಸಿರುವ ನಾಟಕದಲ್ಲಿ, ರಂಗಾಯಣದ ಈ ಸಾಲಿನ ರೆಪರ್ಟರಿ ಕಲಾವಿದರು ಅಭಿನಯಿಸಿದ್ದರು. ರಂಗಕರ್ಮಿ ಅ.ಚಿ.ಪ್ರಕಾಶ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ನಾಟಕ, ರೆಸ್ಪಾನ್ಸ್ ಹೇಗಿತ್ತು?
ಎರಡು ಗಂಟೆ ಅವಧಿಯ ನಾಟಕದಲ್ಲಿ ಚಾಣಕ್ಯನ ಚಾಣಾಕ್ಷತನವನ್ನು ಎಳೆ ಎಳೆಯಾಗಿ ಪ್ರಸ್ತುತಪಡಿಸಲಾಗಿದೆ. ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ನೆನಪಿಗೆ ತರುವ ಸನ್ನಿವೇಶಗಳು ಎದುರಾಗುತ್ತವೆ.
ಮೊದಲ ನಾಟಕಕ್ಕೆ ರಂಗಾಸಕ್ತರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಕೋವಿಡ್ ನಿಯಮದ ಹಿನ್ನೆಲೆ ಇಬ್ಬರ ನಡುವಿನ ಒಂದು ಸೀಟ್ ಬ್ಲಾಕ್ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಬಂದಿದ್ದರಿಂದ ಅನಿವಾರ್ಯವಾಗಿ ಹಲವರನ್ನು ಹಿಂದೆ ಕಳುಹಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
VIDEO REPORT
ಇವತ್ತು ಮತ್ತೊಂದು ಪ್ರದರ್ಶನ
ಚಾಣಕ್ಯ ಪ್ರಪಂಚ ನಾಟಕದ ಎರಡನೆ ಪ್ರದರ್ಶನ ಸೋಮವಾರ ಸಂಜೆ 6 ಗಂಟೆಗೆ ಇರಲಿದೆ ಎಂದು ಸಂದೇಶ ಜವಳಿ ತಿಳಿಸಿದ್ದಾರೆ.
ರಂಗ ಸಮಾಜ ಸದಸ್ಯ ಹಾಲಸ್ವಾಮಿ, ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200