ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 MAY 2023
SHIMOGA : ಊಟದ ವ್ಯವಸ್ಥೆಯಲ್ಲಿ ವಿಳಂಬವಾಗಿದ್ದರಿಂದ ಅಧಿಕಾರಿಗಳು ಸುಮಾರು ಒಂದು ಗಂಟೆ ತಡವಾಗಿ ಮತಗಟ್ಟೆಗಳತ್ತ ತೆರಳುವಂತಾಯಿತು. ಇನ್ನು, ಮತಗಟ್ಟೆ ಅಧಿಕಾರಿಗಳಿಬ್ಬರು ಮದ್ಯಪಾನ (drunk) ಮಾಡಿ ಕರ್ತವ್ಯಕ್ಕೆ ಹಾಜರಾಗಿ, ಮಸ್ಟರಿಂಗ್ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ.
ಲೇಟ್ ಆಯ್ತು ಊಟ
ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ನಡೆಯಿತು. ಮತಗಟ್ಟೆಗಳಿಗೆ ತೆರಳಬೇಕಿದ್ದ ಅಧಿಕಾರಿಗಳು ಬೆಳಗ್ಗೆ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದರು. ಹಾಗಾಗಿ ಜಿಲ್ಲಾಡಳಿತದ ವತಿಯಿಂದಲೆ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು,. ಆದರೆ ಇದು ವಿಳಂಬವಾಗಿದ್ದರಿಂದ ಅಧಿಕಾರಿಗಳು ಸುಮಾರು ಒಂದು ಗಂಟೆ ತಡವಾಗಿ ಮತಗಟ್ಟೆಗಳತ್ತ ತೆರಳಬೇಕಾಯಿತು.

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರ್ಧಕ್ಕರ್ಧ ಅಧಿಕಾರಿಗಳು ಊಟ ಮುಗಿಸಿದ್ದರು. ಇನ್ನಷ್ಟು ಅಧಿಕಾರಿಗಳು ಊಟಕ್ಕಾಗಿ ಕ್ಯೂನಲ್ಲಿ ನಿಂತಿದ್ದರು. ಅಷ್ಟು ಹೊತ್ತಿಗೆ ಊಟ ಖಾಲಿಯಾಗಿತ್ತು. ನಿರ್ದಿಷ್ಟ ಸಂಖ್ಯೆಯ ಅಧಿಕಾರಿಗಳು ಬರುತ್ತಾರೆ ಎಂಬುದು ಮೊದಲೇ ತಿಳಿದಿದ್ದರೂ ಊಟ ಕೊರತೆಯಾಗಿದ್ದು ಹೇಗೆ ಅಧಿಕಾರಿಗಳ ನಡುವೆ ಚರ್ಚೆ ಹುಟ್ಟುಹಾಕಿತು. ಅರ್ಧ ಗಂಟೆಗೂ ಹೆಚ್ಚು ಹೊತ್ತಿನ ಬಳಿಕ ಉಳಿದ ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.

ಮದ್ಯ ಸೇವಿಸಿ ಬಂದ ಅಧಿಕಾರಿಗಳು
ಇನ್ನು, ಮದ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಆರೋಪದ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ವೈದ್ಯಕೀಯ ತಪಾಸಣೆ ಕಳುಹಿಸಲಾಯಿತು. ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಓರ್ವ ಅಧಿಕಾರಿ ಮತ್ತು ಶಿಕ್ಷಕ ಮಧ್ಯಾಹ್ನವೇ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಇನ್ನೇನು ಮಸ್ಟರಿಂಗ್ ಪ್ರಕ್ರಿಯೆ ಮುಗಿದು ಮತಗಟ್ಟೆಗಳತ್ತ ತೆರಳಬೇಕು ಅನ್ನುವಾಗ ಇಬ್ಬರು ಅಧಿಕಾರಿಗಳು ಮದ್ಯ (drunk) ಸೇವಿಸಿರುವುದು ಗೊತ್ತಾಗಿದೆ.
WATCH VIDEO
CLICK HERE FOR MORE INFORMATION
ಶಿವಮೊಗ್ಗ ಎನ್‌ಇಎಸ್ ಮಸ್ಟರಿಂಗ್ ಕೇಂದ್ರದಲ್ಲಿ ಘಟನೆ ನಡೆದಿದೆ. ಆಂಬುಲೆನ್ಸ್ ಕರೆಯಿಸಿ ಇಬ್ಬರು ಅಧಿಕಾರಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಯಿತು. ಆರೋಪ ಸಾಬೀತಾದರೆ ಇಬ್ಬರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ತಲುಪಿದ ಮತ ಯಂತ್ರ, ಹೇಗಿತ್ತು ಮಸ್ಟರಿಂಗ್? ಎಷ್ಟೆಲ್ಲ ಸಿಬ್ಬಂದಿ ನಿಯೋಜನೆ ಆಗಿದೆ?
LATEST NEWS
- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 9 ಮಾರ್ಚ್ 2026

- ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಏ.14ರವರೆಗೆ ಗಡುವು ನೀಡಿದ ಭದ್ರಾವತಿ ರಾಜು, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





