ಶಿವಮೊಗ್ಗ ಸಿಟಿ, ಆಯನೂರು, ಹಾರನಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಯಾವ್ಯಾವ ದಿನ ಎಲ್ಲೆಲ್ಲಿ ಡ್ರೈ ಡೇ?

ಶಿವಮೊಗ್ಗ: ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಗಣಪತಿಗಳ ವಿಸರ್ಜನೆ ಸಂದರ್ಭ ಆಯಾ ವ್ಯಾಪ್ತಿಯಲ್ಲಿ ಮದ್ಯ ತಯಾರಿಕೆ, ಮಾರಾಟ, ಸರಬರಾಜು ಮತ್ತು ಸಾಗಾಟ ನಿಷೇಧಿಸಲಾಗಿದೆ. ಆಯಾ ವ್ಯಾಪ್ತಿಯಲ್ಲಿ ಡ್ರೈ ಡೇ (Dry Day) ಘೋಷಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 10 ಪ್ಯಾರಾಗಳು ಕೆಳಗಿವೆ)

ಎಲ್ಲೆಲ್ಲಿ ಯಾವಾಗ ಡ್ರೈ ಡೇ?

ಶಿವಮೊಗ್ಗ ಸಿಟಿ

» ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ಮೆರವಣಿಗೆ – ಸೆ.5ರ ಸಂಜೆ 6 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಾಟ ನಿಷೇಧ

» ಓಂ ಗಣಪತಿ – ಸೆ.11ರಂದು ವಿಸರ್ಜನೆ – ಸೆ.10ರ ಸಂಜೆ 6 ಗಂಟೆಯಿಂದ ಸೆ.12ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಮಹಾನಗರ ಪಾಲಿಕೆ ಅಧಿಕಾರಿ ಬಲೆಗೆ

» ಟ್ಯಾಂಕ್‌ ಮೊಹಲ್ಲಾದ ಶ್ರೀ ಮಾರಿಕಾಂಬ ಸೇವಾ ಸಮಿತಿ – ಸೆ.25ರಂದು ವಿಸರ್ಜನೆ – ಸೆ.24ರ ಸಂಜೆ 6 ಗಂಟೆಯಿಂದ ಸೆ.26ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

Alcohol-sale-ban-in-Shimoga
Gemini_Generated_Image

» ಟ್ಯಾಂಕ್‌ ಮೊಹಲ್ಲಾದ ಕೇಸರಿ ಪಡೆ – ಸೆ.30ರಂದು ವಿಸರ್ಜನೆ – ಸೆ.29ರ ಸಂಜೆ 6 ಗಂಟೆಯಿಂದ ಸೆ.31ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಇದನ್ನೂ ಓದಿ » ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳ ಹರಿವು, ತುಂಗಾ, ಭದ್ರಾಗೆ ಎಷ್ಟು ನೀರು ಹರಿದು ಬರ್ತಿದೆ? ಇಲ್ಲಿದೆ ಡಿಟೇಲ್ಸ್‌

» ರಾಗಿಗುಡ್ಡದ ಒಟ್ಟು 16 ಗಣಪತಿ – ಸೆ.31ರಂದು ವಿಸರ್ಜನೆ – ಸೆ.31ರ ಸಂಜೆ 6 ಗಂಟೆಯಿಂದ ಅ.1ರ ಬೆಳಗ್ಗೆ 6 ಗಂಟೆವರೆಗೆ – ಶಿವಮೊಗ್ಗ ನಗರ ರಾಗಿಗುಡ್ಡ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ.

ಶಿವಮೊಗ್ಗ ತಾಲೂಕು

» ಆಯನೂರಿನ ಕೋಹಳ್ಳಿಯ ಹಿಂದೂ ಮಹಾಸಭಾ ಗಣಪತಿ – ಸೆ.6ರಂದು ವಿಸರ್ಜನೆ – ಸೆ.5ರ ರಾತ್ರಿ 11 ಗಂಟೆಯಿಂದ ಸೆ.7ರ ಬೆಳಗ್ಗೆ 6 ಗಂಟೆವರೆಗೆ – ಆಯನೂರು ಮತ್ತು ಕುಂಸಿಯ 4 ಬಾರ್‌ಗಳಲ್ಲಿ ಮದ್ಯ ಮಾರಾಟ ನಿಷೇಧ.

» ಹಾರನಹಳ್ಳಿ ಹಿಂದೂ ಮಹಾಸಭಾ ಗಣಪತಿ – ಸೆ.8ರಂದು ವಿಸರ್ಜನೆ – ಸೆ.7ರ ರಾತ್ರಿ 11 ಗಂಟೆಯಿಂದ ಸೆ.9ರ ಬೆಳಗ್ಗೆ 6 ಗಂಟೆವರೆಗೆ ನಿಷೇಧ – ಹಾರನಹಳ್ಳಿ ವ್ಯಾಪ್ತಿಯ 2 ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ನಿಷೇಧ.

Dry Day in shivamogga city and taluk

Alcohol-sale-ban-in-Shimoga

Leave a Comment