ಪೆಟ್ರೋಲ್‌ನಲ್ಲಿ ಎಥನಾಲ್‌, ಶಿವಮೊಗ್ಗದಲ್ಲಿ ಖುದ್ದು ಪರೀಕ್ಷಿಸಿದ ಬಿಜೆಪಿ ಎಂಎಲ್‌ಸಿ, ರಿಸಲ್ಟ್‌ ಏನಿತ್ತು?

ಶಿವಮೊಗ್ಗ: ಪೆಟ್ರೋಲ್‌ಗೆ ಶೇ.30ರಷ್ಟು ಎಥನಾಲ್‌ ಸೇರಿಸಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಈ ಮಧ್ಯೆ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಮತ್ತು ಪೆಟ್ರೋಲ್‌ ಬಂಕ್‌ ಮಾಲೀಕ ಡಿ.ಎಸ್‌.ಅರುಣ್‌ ಅವರು ಬಂಕ್‌ನಲ್ಲೇ ಪೆಟ್ರೋಲ್‌ ಪಡೆದು ಪರೀಕ್ಷಿಸಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪರೀಕ್ಷೆಗೆ ಲ್ಯಾಬ್‌ಗೆ ಹೋಗಬೇಕಿಲ್ಲ

ಪೆಟ್ರೋಲ್‌ಗೆ ಶೇ.19 ರಿಂದ ಶೇ.21ರಷ್ಟು ಪ್ರಮಾಣದವರೆಗೆ ಎಥನಾಲ್‌ ಸೇರಿಸಲು ಅವಕಾಶವಿದೆ. ಇದಕ್ಕಿಂತಲು ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್‌ ಇದ್ದರೆ ಪೆಟ್ರೋಲ್‌ ಬಂಕ್‌ ಮತ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದನ್ನು ಪರೀಕ್ಷಿಸಲು ಲ್ಯಾಬ್‌ಗೆ ಹೋಗಬೇಕು ಎಂದೇನು ಇಲ್ಲ ಎಂದು ಸರ್ಕಾರಕ್ಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

DS-Arun-inspects-petrol-quality-over-ethanol-blending-claims

ಹೇಗೆ ನಡೆಸಿದರು ಪರೀಕ್ಷೆ? ಇಲ್ಲಿದೆ ವಿಡಿಯೋ

ಶಿವಮೊಗ್ಗದ ಪೆಟ್ರೋಲ್‌ ಬಂಕ್‌ನಲ್ಲಿ ಡಿ.ಎಸ್‌.ಅರುಣ್‌ ಅವರು ಟೆಸ್ಟ್‌ ಟ್ಯೂಬ್‌ಗೆ ಪೆಟ್ರೋಲ್‌ ಮತ್ತು ನೀರು ಸೇರಿಸಿ ಪರೀಕ್ಷಿಸಿದರು. ಇಲ್ಲಿದೆ ವಿಡಿಯೋ:

ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರವನ್ನು ದೂರುವುದಕ್ಕೆ ಸೀಮಿತವಾಗದೆ, ಮೊದಲು ಈ ಸರಳ ವಿಧಾನ ತಿಳಿದುಕೊಂಡು ವಾಸ್ತವಾಂಶ ಅರಿಯುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ಆಕ್ರೋಶಗೊಂಡಿರುವ ಸಂದರ್ಭ, ಮೂಲ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಇಂತಹ ಪ್ರಯತ್ನಗಳು ಸರಿಯಲ್ಲ ಎಂದು ಡಿ.ಎಸ್‌.ಅರುಣ್‌ ಆಕ್ರೋಶ ವ್ಯಕ್ತಪಡಿಸಿದರು.