ಗುರುಪುರದ ಟೀ ಸ್ಟಾಲ್ ಮುಂದೆ ಡಿವೈಎಸ್’ಪಿ ನೇತೃತ್ವದಲ್ಲಿ ದಾಳಿ, ಮೂವರು ಯುವಕರು ಅರೆಸ್ಟ್

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 30 ಮಾರ್ಚ್ 2022

ಶಿವಮೊಗ್ಗದ ಗುರುಪುರದಲ್ಲಿ ಡಿವೈಎಸ್’ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.

ಗುರುಪುರದ ಟೀ ಸ್ಟಾಲ್ ಒಂದರ ಮುಂದೆ ದಾಳಿ ನಡೆಸಲಾಗಿದೆ. ಗುರುಪುರದ ಕುಮಾರ್, ಪವನ್, ಪುರಲೆಯ ರಾಕೇಶ್ ಎಂಬುವವರನ್ನು ಬಂಧಿಸಲಾಗಿದೆ. ಹೊಸಮನೆ ಬಡಾವಣೆಯ ಸಂದೀಪ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ದಾಳಿಗೆ ಕಾರಣವೇನು?

ಗುರುಪುರದಲ್ಲಿ ಕೆಲವರು ಓ.ಸಿ. ಜೂಜಾಟ ಆಡಿಸುತ್ತಿರುವ ಕುರಿತು ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.

ಟೀ ಅಂಗಡಿ ಮುಂದೆ ಬೈಕ್ ನಿಲ್ಲಿಸಿಕೊಂಡು ಕುಮಾರ್, ಪವರ್, ರಾಕೇಶ್ ಓ.ಸಿ. ಬರೆಯುತ್ತಿದ್ದರು. ಇವರ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಓ.ಸಿ. ಬರೆಯಲು ಇಟ್ಟುಕೊಂಡಿದ್ದ 16 ಪೇಪರ್ ಶೀಟ್, ಎರಡು ಬೈಕ್’ಗಳು, ಮೂರು ಮೊಬೈಲ್ ಫೋನ್, 9820 ರೂ. ನಗದು ವಶಕ್ಕೆ ಪಡೆಯಲಾಗಿದೆ.

ಇನ್ನು, ಇಲ್ಲಿ ಸಂಗ್ರಹಿಸಿದ ಓ.ಸಿ. ಹಣವನ್ನು ಹೊಸಮನೆಯ ಸಂದೀಪ್ ಎಂಬಾತನಿಗೆ ಕೊಡುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆದ್ದರಿಂದ ಆತನ ವಿರುದ್ಧವು ಎಫ್ಐಆರ್ ದಾಖಲು ಮಾಡಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Leave a Comment