ಗುಡ್‌ ನ್ಯೂಸ್‌, ಶಿವಮೊಗ್ಗ – ಬೆಂಗಳೂರು KSRTC ಇ-ಬಸ್‌ ಸೇವೆ ಶುರು, ಹೇಗಿದೆ ಬಸ್? ಟಿಕೆಟ್‌ ರೇಟ್ ಎಷ್ಟಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 27 MAY 2023

SHIMOGA : ಮೈಸೂರು, ಬೆಂಗಳೂರು ನಗರಗಳ ಮಧ್ಯೆ ಸಂಚಾರಕ್ಕೆ ಸೀಮಿತವಾಗಿದ್ದ ಎಲೆಕ್ಟ್ರಿಕ್‌ ಬಸ್ಸುಗಳು (E-bus) ಈಗ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚಾರ ಆರಂಭಿಸಿವೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ಇವತ್ತಿನಿಂದ ಪ್ರಾಯೋಗಿಕ ವಿದ್ಯುತ್‌ ಚಾಲಿತ ಬಸ್‌ ಸಂಚಾರ ಆರಂಭವಾಗಿದೆ.

Shimoga-Bengaluru-E-bus-started

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಮೊದಲ ಎಲೆಕ್ಟ್ರಿಕ್‌ ಬಸ್‌ ಇವತ್ತು ಬೆಂಗಳೂರಿಗೆ ತೆರಳಿತು. ವಿಭಾಗದ ಸಿಬ್ಬಂದಿ ಪೂಜೆ ಸಲ್ಲಿಸಿ ಬಸ್‌ಗೆ ಚಾಲನೆ ನೀಡಿದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗ ವಿಭಾಗಕ್ಕೆ 10 ಬಸ್‌

ಮಾರ್ಚ್‌ 20ರಂದು ರಾಜ್ಯದಲ್ಲಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಪ್ರಾಯೋಗಿಕವಾಗಿ ಬೆಂಗಳೂರು – ಮೈಸೂರು ನಡುವೆ ಮಾತ್ರ ಬಸ್ಸುಗಳು ಸಂಚರಿಸುತ್ತಿದ್ದವು. ಹಂತ ಹಂತವಾಗಿ ಬೆಂಗಳೂರಿನಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ, ಮಡಿಕೇರಿಗೆ ವಿದ್ಯುತ್‌ ಬಸ್‌ ಸೇವೆ ವಿಸ್ತರಣೆಗೆ ಯೋಜಿಸಲಾಗಿತ್ತು. ಅದರಂತೆ ಶಿವಮೊಗ್ಗ ಬೆಂಗಳೂರು ಮಧ್ಯೆ ಬಸ್‌ ಸಂಚಾರ ಆರಂಭವಾಗಿದೆ.

ಶಿವಮೊಗ್ಗ ವಿಭಾಗಕ್ಕೆ 10 ಇ – ಬಸ್ಸುಗಳನ್ನು ಹಂಚಿಕೆ ಮಾಡಲಾಗಿದೆ. ಇವತ್ತು ಒಂದು ಬಸ್‌ ಸಂಚಾರ ಆರಂಭವಾಗಿದೆ. ಹಂತ ಹಂತವಾಗಿ ಉಳಿದ ಬಸ್ಸುಗಳು ಶಿವಮೊಗ್ಗ ಬೆಂಗಳೂರು ಮಧ್ಯೆ ಸಂಚಾರ ಶುರ ಮಾಡಲಿವೆವಿಜಯ ಕುಮಾರ್‌, ವಿಭಾಗೀಯ ನಿಯತ್ರಣಾಧಿಕಾರಿ

ಮೊದಲ ಬಸ್‌ ಟೈಮಿಂಗ್‌ ಏನು?

ಸದ್ಯ ಮೊದಲ ಎಲೆಕ್ಟ್ರಿಕ್‌ ಬಸ್‌ (E-bus) ಶಿವಮೊಗ್ಗ – ಬೆಂಗಳೂರು ಮತ್ತು ಬೆಂಗಳೂರು – ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸಲಿದೆ. ಶಿವಮೊಗ್ಗದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸಂಜೆ 6 ಗಂಟೆಗೆ ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತಲುಪಲಿದೆ. ಇನ್ನು, ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಡಲಿರುವ ಎಲೆಕ್ಟ್ರಿಕ್‌ ಬಸ್‌ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಬಸ್ಸಿನ ವಿಶೇಷತೆಗಳೇನು? ಚಾರ್ಜ್‌ ಎಷ್ಟು?

ಎಲೆಕ್ಟ್ರಿಕ್‌ ಬಸ್ಸುಗಳು ಅತ್ಯಾಧುನಿಕ ಲಿ-ಆನ್‌ ಫಾಸ್ಪೇಟ್‌ ಬ್ಯಾಟರಿ ಹೊಂದಿದೆ. ಒಮ್ಮೆ ಬ್ಯಾಟರಿ ಚಾರ್ಜ್‌ ಆಗಲು ಸುಮಾರು ಎರಡೂವರೆ ಗಂಟೆ ಸಮಯ ಹಿಡಿಯಲಿದೆ. ಶಿವಮೊಗ್ಗ ಡಿಪೋದಲ್ಲಿ ಬಸ್‌ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ 300 ಕಿ.ಮೀವರೆಗೆ ಬಸ್‌ ಸಂಚರಿಸಲಿದೆ.

Electric Bus Service Started from Shimoga

ಇ-ಬಸ್ಸುಗಳು ಒಂದು ಚಾರ್ಜ್‌ಗೆ 300 ಕಿ.ಮೀ ಸಂಚರಿಸಲಿವೆ. ಶಿವಮೊಗ್ಗ – ಬೆಂಗಳೂರು ಮಧ್ಯೆ 270 ಕಿ.ಮೀ ಇದೆ. ಇಲ್ಲಿಂದ ಬೆಂಗಳೂರಿಗೆ ತೆರಳಿರುವ ಬಸ್ಸು ಬೆಂಗಳೂರಿನಲ್ಲಿ ಚಾರ್ಜ್‌ ಆಗಲಿದೆ. ಶಿವಮೊಗ್ಗ ಡಿಪೋದಲ್ಲಿಯು ಚಾರ್ಜಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.ವಿಜಯ ಕುಮಾರ್‌, ವಿಭಾಗೀಯ ನಿಯತ್ರಣಾಧಿಕಾರಿ

ಇವಿ ಪ್ಲಸ್‌ ಬಸ್ಸುಗಳಲ್ಲಿ  43 ಸೀಟುಗಳಿವೆ. ಶಿವಮೊಗ್ಗ – ಬೆಂಗಳೂರು ಮಾರ್ಗದ ಟಿಕೆಟ್‌ ದರ 600 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ – ಶರಾವತಿ ಹಿನ್ನೀರಿನ ಮುಪ್ಪಾನೆ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಕಾರಣವೇನು?

ಇವಿ ಪ್ಲಸ್‌ ಬಸ್ಸುಗಳು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಸಿಸಿ ಕ್ಯಾಮರಾ, ಅಗ್ನಿಶಾಮಕ ಸಾಧನ, ಎಮರ್ಜನ್ಸಿ ಬಟನ್‌ಗಳು, ಪ್ರಥಮ ಚಿಕಿತ್ಸೆ ಕಿಟ್‌, ಗ್ಲಾಸ್‌ ಹ್ಯಾಮರ್‌ ಸೇರಿದಂತೆ ಹಲವು ಸೌಲಭ್ಯಗಳಿವೆ.

ಆನ್‌ ಲೈನ್‌ ಮೂಲಕ ಇ-ಬಸ್ಸುಗಳಲ್ಲಿ ಬೆಂಗಳೂರಿಗೆ ಸಂಚರಿಸಲು https://awatar.ksrtc.in ಟಿಕೆಟ್‌ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ.

SHIVAMOGGA-LIVE-NITIN-KAIDOTLU

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 27, 2023

Leave a Comment