ಶಿವಮೊಗ್ಗದ ಪೆಟ್ರೋಲ್‌ ಬಂಕ್‌ ಮೇಲೆ ಚುನಾವಣ ಅಧಿಕಾರಿಗಳ ದಾಳಿ, ಕಾಂಗ್ರೆಸಿಗರ ಆಕ್ಷೇಪ, ಕೆಲಕಾಲ ಗೊಂದಲ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 4 MAY 2024

SHIMOGA : ದುರ್ಗಿಗುಡಿಯಲ್ಲಿ ಕಾಂಗ್ರೆಸ್‌ ಮುಖಂಡನ ಪೆಟ್ರೋಲ್‌ ಬಂಕ್‌ ಒಂದರ ಮೇಲೆ ಚುನಾವಣ ಅಧಿಕಾರಿಗಳು ಕಳೆದ ರಾತ್ರಿ ದಾಳಿ ನಡೆಸಿದರು. ನಗದು ವಶಕ್ಕೆ ಪಡೆಯಲಾಗಿದೆ. ಆದರೆ ಈ ವಿಚಾರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ಜಯನಗರ ಠಾಣೆ ಮೆಟ್ಟಿಲೇರಿದೆ.

ಪೆಟ್ರೋಲ್‌ ಬಂಕ್‌ ಮೇಲೆ ದಾಳಿ

ಚುನಾವಣ ಫ್ಲೈಯಿಂಗ್‌ ಸ್ಕ್ವಾಡ್‌ ತಂಡ ಕಾಂಗ್ರೆಸ್‌ ಮುಖಂಡ ಹೆಚ್‌.ಸಿ.ಯೋಗೇಶ್‌ ಅವರಿಗೆ ಸೇರಿದ ಪೆಟ್ರೊಲ್‌ ಬಂಕ್‌ ಮೇಲೆ ಕಳೆದ ರಾತ್ರಿ ದಾಳಿ ನಡೆಸಿತು. ದಾಖಲೆ ಇಲ್ಲದ ಹಣವನ್ನು ವಶಕ್ಕೆ ಪಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪೆಟ್ರೋಲ್‌ ಬಂಕ್‌ ಬಳಿ ದೌಡಾಯಿಸಿದರು. ಈ ವೇಳೆ ಕೆಲವು ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಾಂಗ್ರೆಸ್‌ ಕಾರ್ಯಕರ್ತರ 2 ಪ್ರಮುಖ ಆರೋಪ

point-1ನಂಬರ್ ಪ್ಲೇಟೇ ಇಲ್ಲದ ಕಾರಿನಲ್ಲಿ ಚುನಾವಣ ಅಧಿಕಾರಿಗಳ ಬಂದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮೂರು ತಿಂಗಳ ಹಿಂದೆ ಕಾರು ಖರೀದಿ ಆಗಿದೆ. ಆದರೆ ನಂಬರ್ ಪ್ಲೇಟ್ ಇಲ್ಲ. ಚಾಲಕನಿಗೆ ಬ್ಯಾಡ್ಜ್ ಕೂಡ ಇಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು ದೂರಿದರು.

point-2ಬಂಕ್‌ನಲ್ಲಿ ನಿತ್ಯ ವ್ಯವಹಾರದ ಹಣ 9.70 ಲಕ್ಷ ರೂ. ಇತ್ತು. ಈಗ ಅಧಿಕಾರಿಗಳು 8 ಲಕ್ಷ ರೂ. ಎಂದು ಹೇಳುತ್ತಿದ್ದಾರೆ. ಹಾಗಾದರೆ ಉಳಿದ 1.70 ಲಕ್ಷ ರೂ. ಏನಾಯಿತು ಎಂದು ಮಾಲೀಕರು ಪ್ರಶ್ನೆ ಮಾಡಿದರು.

ಈ ವೇಳೆ ಜಯನಗರ ಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಠಾಣೆಗೆ ಬಂದು ಲಿಖಿತ ದೂರು ನೀಡುವಂತೆ ಸಲಹೆ ನೀಡಿದರು. ಘಟನೆ ಬೆನ್ನಲ್ಲೇ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿದ್ದ ಚುನಾವಣಾಧಿಕಾರಿಗಳು ಫಜೀತಿಗೆ ಒಳಗಾದರು.

ಇದನ್ನೂ ಓದಿ – ಟೂರಿಸ್ಟ್‌ ಬಸ್‌ ಪಲ್ಟಿ, ಜೋಗಕ್ಕೆ ಬಂದವರಿಗೆ ಎದುರಾದ ಜವರಾಯ, ಇಬ್ಬರು ಸಾವು

Leave a Comment