ಚೈತ್ರಾ ಕುಂದಾಪುರ ಕೇಸ್‌, ಶಿವಮೊಗ್ಗಕ್ಕೆ ಆರೋಪಿ ಕರೆತಂದ ಸಿಸಿಬಿ ಪೊಲೀಸ್‌, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 SEPTEMBER 2023

SHIMOGA : ವಿಧಾನಸಭೆ ಚುನಾವಣೆಗೆ ಟಿಕೆಟ್‌ (Election Ticket) ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ ಮತ್ತು ತಂಡ 5 ಕೋಟಿ ರೂ. ವಂಚಿಸಿದ ಪ್ರಕರಣದ ಸಂಬಂಧ ಶಿವಮೊಗ್ಗದಲ್ಲಿ ಮಹಜರ್‌ ನಡೆಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ಗಗನ್‌ ಕಡೂರ್‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಶಿವಮೊಗ್ಗಕ್ಕೆ ಕರೆತಂದಿದ್ದರು.

ಶಿವಮೊಗ್ಗದಲ್ಲಿ ಗೋವಿಂದ ಬಾಬು ಪೂಜಾರಿ ಅವರಿಂದ ಗಗನ್‌ ಕಡೂರು 50 ಲಕ್ಷ ರೂ. ಹಣ ಪಡೆದಿದ್ದ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಆ ಸ್ಥಳ, ಆರೋಪಿಗಳು ಉಳಿದುಕೊಂಡಿದ್ದ ಬಿ.ಹೆಚ್‌. ರಸ್ತೆ ಪಕ್ಕದ ಹೋಟೆಲ್ ಹಾಗೂ ಪ್ರಮುಖ ಕಲ್ಯಾಣಮಂದಿರದ ಬಳಿ ಮಹಜರ್‌ ನಡೆಸಲಾಯಿತು. ಸಿಸಿಬಿ ಇನ್ಸ್‌ಪೆಕ್ಟರ್‌ ಭರತ್ ನೇತೃತ್ವದ ಪೊಲೀಸರ ತಂಡ ಮಹಜರ್‌ ನಡೆಸಿದರು. ಸ್ಥಳದಲ್ಲಿ ಆರೋಪಿ ಗಗನ್‌ ಕಡೂರುನನ್ನು ನಿಲ್ಲಿಸಿ ಫೋಟೊ ತೆಗೆದುಕೊಂಡು ತೆರಳಿದರು.

ಇದನ್ನೂ ಓದಿ – ತೀರ್ಥಹಳ್ಳಿ ಮೂಲದ ಶಂಕಿತ ದೆಹಲಿ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment