ನವುಲೆ ಕೆರೆ ಏರಿ ಮೇಲೆ ತಪ್ಪಿದ ದುರಂತ, ಕೆಲಕಾಲ ಸ್ಥಳೀಯರಲ್ಲಿ ಆತಂಕ, ಟಿಪ್ಪರ್‌ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 30 MAY 2023

SHIMOGA : ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ತಗುಲಿ ಎರಡು ವಿದ್ಯುತ್‌ ಕಂಬಗಳು (Electric Poles) ಧರೆಗುರುಳಿವೆ. ಚಾಲಕನ ಅಜಾಗರೂಕತೆಯೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

Electric-cable-struck-to-Tipper-Lorry-in-Navule-in-Shimoga
ಫೊಟೋ & ಮಾಹಿತಿ : ಮೋಹನ್

ಶಿವಮೊಗ್ಗದ ನವುಲೆ ಬಳಿ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಟಿಪ್ಪರ್‌ ಲಾರಿಗೆ ವಿದ್ಯುತ್‌ ತಂತಿ ಸಿಲುಕಿದ್ದು ಎಡ ಭಾಗದಲ್ಲಿದ್ದ ಎರಡು ವಿದ್ಯುತ್‌ ಕಂಬಿಗಳು ಮುರಿದು ಬಿದ್ದಿವೆ.

ಇದನ್ನೂ ಓದಿ – ಶಿವಮೊಗ್ಗದ ಕಾಲೇಜಿನಲ್ಲಿ ಅಡ್ಮಿಷನ್‌ಗೆ ತಂದೆ ಜೊತೆ ತೆರಳುತ್ತಿದ್ದ ಯುವತಿ ತಲೆ ಮೇಲೆ ಹರಿದ ಲಾರಿ

ನಿರ್ಲಕ್ಷ್ಯವೇ ಘಟನೆಗೆ ಕಾರಣ

ಟಿಪ್ಪರ್‌ ಸಂಪೂರ್ಣವಾಗಿ ಕೆಳಗಿಳಿಸದೆ ಚಾಲಕ ಲಾರಿಯನ್ನು ಕೊಂಡೊಯ್ದಿದ್ದೆ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ವಿದ್ಯುತ್‌ ತಂತಿಗಳು ಟಿಪ್ಪರ್‌ಗೆ ಸಿಲುಕಿವೆ. ಲಾರಿಯ ವೇಗ ಹೆಚ್ಚಿದ್ದರಿಂದ ವಿದ್ಯುತ್‌ ತಂತಿಗಳು ಜಗ್ಗಾಡಿ ಕಂಬಗಳು ಮುರಿದು ಬಿದ್ದಿವೆ. ತಕ್ಷಣಕ್ಕೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ.

ನವುಲೆ ಕೆರೆ ಏರಿ ಮೇಲೆ ಹಳೆಯ ರಸ್ತೆ ನಿರುಪಯುಕ್ತವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ವಾಹನಗಳು, ಜನರ ಸಂಚಾರ ಕಡಿಮೆ. ಇದೆ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್‌ ಕಂಬಗಳಿವೆ. ನಿರುಪಯುಕ್ತ ರಸ್ತೆಯಲ್ಲಿ ಜನ ಸಂಚಾರ ಇಲ್ಲದಿರುವುದರಿಂದ ಯಾರಿಗೂ ಹಾನಿಯಾಗಿಲ್ಲ. ಘಟನೆಯಿಂದಾಗಿ ಕೆಲಕಾಲ ಸ್ಥಳೀಯರು ಆತಂಕಕ್ಕೀಡಾಗಿದ್ದರು. ವಿಚಾರ ತಿಳಿದು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment