ಶಿವಮೊಗ್ಗ ಲೈವ್.ಕಾಂ | SHIMOGA NEWS | 5 APRIL 2021
ವಿದ್ಯುತ್ ಕಂಬದ ಸುತ್ತಲು ಚರಂಡಿ ನಿರ್ಮಿಸಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೊನೆಗೂ ಬಿಸಿ ತಟ್ಟಿದೆ. ಶಿವಮೊಗ್ಗ ಲೈವ್.ಕಾಂ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಈಗ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿದ್ದಾರೆ.
ಮೂರನೆ ಪ್ಯಾರಾ ಈ ಜಾಹೀರಾತಿನ ಕೆಳಗಿದೆ

ಇದನ್ನೂ ಓದಿ | ಇದಪ್ಪ ಸ್ಮಾರ್ಟ್ ಸಿಟಿ..! ಶಿವಮೊಗ್ಗ ಡಿಸಿ, ಸಿಇಒ ಬಂಗಲೆ ಎದುರಲ್ಲೇ ಹೀಗಿದೆ ಕಾಮಗಾರಿ, ಏನಾಗಿದೆ? ಹೊಣೆ ಯಾರು?
ಮಾರ್ಚ್ 30ರಂದು ಈ ಕುರಿತು ಶಿವಮೊಗ್ಗ ಲೈವ್.ಕಾಂನಲ್ಲಿ ವರದಿ ಪ್ರಟಕವಾಗಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಮನೆ ಮುಂದೆಯೇ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಎಡವಟ್ಟು ಆಗಿರುವುದನ್ನು ಪ್ರಕಟಿಸಲಾಗಿತ್ತು. ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೆಯೇ ಹೊಸದಾಗಿ ಚರಂಡಿ ನಿರ್ಮಿಸಲಾಗಿತ್ತು.
ಅಧಿಕಾರಿಗಳಿಗೆ ತಟ್ಟಿದ ಬಿಸಿ
ಶಿವಮೊಗ್ಗ ಲೈವ್.ಕಾಂ ವರದಿ ಗಮನಿಸಿದ ಅಧಿಕಾರಿಗಳು, ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿದ್ದಾರೆ. ಚರಂಡಿಯೊಳಗಿದ್ದ ವಿದ್ಯುತ್ ಕಂಬಗಳನ್ನು ಅದರ ಪಕ್ಕಕ್ಕೆ, ರಸ್ತೆ ಮೇಲೆ ಸ್ಥಳಾಂತರಿಸಲಾಗಿದೆ.
ಈಗ ಚರಂಡಿಗೆ ಹಾನಿ
ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿದ್ದಾರೆ. ಇದಕ್ಕಾಗಿ ಚರಂಡಿಯ ಕಾಂಕ್ರಿಟ್ ಒಡೆಯಲಾಗಿದೆ. ವಿದ್ಯುತ್ ಕಂಬಗಳಿದ್ದ ಭಾಗಕ್ಕೆ ಹೊಸತಾಗಿ ಕಾಂಕ್ರಿಟ್ ಹಾಕಬೇಕಿದೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ಜನರ ತೆರಿಗೆ ಹಣ ಹೀಗೆ ಪೋಲಾಗುತ್ತಿದೆ.
ಜನರ ಸಹಭಾಗಿತ್ವಕ್ಕೆ ಒತ್ತು ಕೊಡದಿರುವುದು, ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೆ ಇರುವುದು ಕಾಮಗಾರಿಯಲ್ಲಿ ಜನರ ಹಣ ಪೋಲಾಗಲು ಪ್ರಮುಖ ಕಾರಣವಾಗಿದೆ.





ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com





