ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಪುತ್ರ ಕಾಂತೇಶ್ಗೆ ಟಿಕೆಟ್ ಸಿಗದಿದ್ದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ. ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದರು. ಈ ವೇಳೆ, ತಾವು ಶಿವಮೊಗ್ಗದಿಂದ ಸ್ವತಂತ್ರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದೆ ಸಂದರ್ಭ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಈಶ್ವರಪ್ಪ ಏನೇನು ಹೇಳಿದರು. ಇಲ್ಲಿದೆ ಪ್ರಮುಖ 9 ಪಾಯಿಂಟ್
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಈ ಹಿಂದೆ ಕಾಂತೇಶ್ ಅವರು ಯಡಿಯೂರಪ್ಪ ಅವರ ಮನೆಗೆ ಹೋಗಿ ಮಾತಾಡಿದ್ದರು. ‘ತಾವು ಒಪ್ಪಿಗೆ ನೀಡಿದರೆ ಹಾವೇರಿಯಿಂದ ಸ್ಪರ್ಧಿಸುತ್ತೇನೆ’ ಅಂದಿದ್ದರು. ಆಗ ಯಡಿಯೂರಪ್ಪ ಅವರು ‘ಟಿಕೆಟ್ ಕೊಡಿಸುವುದು, ಪ್ರಚಾರ ಮಾಡಿ ಗೆಲ್ಲಿಸುವುದು ತಮ್ಮ ಜವಾಬ್ದಾರಿ’ ಎಂದಿದ್ದರು. ಟಿಕೆಟ್ ನೀಡಿದ್ದರೆ ಕಾಂತೇಶ್ ಗೆಲ್ಲುವು ನಿಶ್ಚಿತವಾಗಿತ್ತು.
ಟಿವಿಯಲ್ಲಿ ಹಾವೇರಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಎಂದು ವರದಿ ಬಂದ ಮೇಲೆ ವಿವಿಧ ಸಮಾಜದ ಪ್ರಮುಖ ನಾಯಕರು ಯಡಿಯೂರಪ್ಪ ಅವರ ಮನೆಯಲ್ಲಿ ಭೇಟಿ ನೀಡಿದ್ದರು. ಆಗ ಯಡಿಯೂರಪ್ಪ ಅವರು ‘ಇನ್ನೂ ಪ್ರಯತ್ನ ಮಾಡುತ್ತೇನೆ’ ಎಂದಿದ್ದರು. ಆದರೆ ಯಡಿಯೂರಪ್ಪ ಅವರು ಚಿಕ್ಕಮಗಳೂರಿಗೆ ಹೋದಾಗ ಶೋಭಾ ಕರಂದ್ಲಾಜೆಗೆ ಮತ ಹಾಕಿ ಎಂದಿದ್ದರು. ಈ ಬಗ್ಗೆ ಕೇಂದ್ರದಲ್ಲಿ ಚರ್ಚೆ ಆಗಿತ್ತೊ ಇಲ್ಲವೊ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಯಡಿಯೂರಪ್ಪ ಅವರೆ ಪ್ರಕಟಿಸಿದ್ದರು. ಆದರೆ ಕಾಂತೇಶ್ಗೆ ಮಾತು ಕೊಟ್ಟಿದ್ದು ಯಾಕೆ ಈಡರೇಸಲಿಲ್ಲ.
ಚುನಾವಣಾ ಸಮಿತಿ ಸಭೆಯಲ್ಲಿ ಕಾಂತೇಶ್ ಹೆಸರು ಪ್ರಸ್ತಾಪವಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಹೆಸರು ಹೇಗೆ ಬಂತು ಗೊತ್ತಿಲ್ಲ. ಅವರಿಗೆ ನಿಲ್ಲುವ ಆಸಕ್ತಿ ಇರದಿದ್ದರು ಟಿಕೆಟ್ ನೀಡಲಾಗಿದೆ. ಇತ್ತ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಗೋ ಬ್ಯಾಕ್ ಚಳವಳಿ ನಡೆಸುತ್ತಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ತಪ್ಪಿದರೆ ಸಿ.ಟಿ.ರವಿಗೆ ಅವಕಾಶ ಸಿಗಬೇಕಿತ್ತು. ಸಿ.ಟಿ.ರವಿ, ಪ್ರತಾಪ್ ಸಿಂಹ ಇವರೆಲ್ಲ ಹಿಂದುತ್ವದ ವಿಚಾರ ಬಂದಾಗ ಗಟ್ಟಿಯಾಗಿ ನಿಲ್ಲುತ್ತಿದ್ದ ಕಾರ್ಯಕರ್ತರು. ಆದರೆ ಇವರಿಗೆ ಟಿಕೆಟ್ ತಪ್ಪಿದೆ.
ನನ್ನ ಪ್ರಾಣ ಹೋದರೂ ಮೋದಿ ವಿರುದ್ಧ ಹೋಗಲ್ಲ. ಹೃದಯ ಬಗೆದರೆ ಒಂದೆಡೆ ರಾಮ, ಮತ್ತೊಂದು ಕಡೆ ಮೋದಿ. ಯಡಿಯೂರಪ್ಪ ಅವರ ಎದೆ ಬಗೆದರೆ ಒಂದು ಕಡೆ ಮಕ್ಕಳು, ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಸರ್ವೆ ವರದಿ ಆಧರಿಸಿ ಕೇಂದ್ರ ನಾಯಕರು ಟಿಕೆಟ್ ಕೊಡುತ್ತಾರೆ ಅಂದುಕೊಂಡಿದ್ದೆವು. ಆದರೆ ಬೆಳಗಾವಿಗೆ ಜಗದೀಶ್ ಶೆಟ್ಟರ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈಗ ಟಿಕೆಟ್ ಕೊಡುವುದು ಯಾರು ಅನ್ನುವುದು ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿಯಲ್ಲಿಯು ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಕಾಂತೇಶ್ ಅಥವಾ ತನಗೆ ಟಿಕೆಟ್ ಸಿಗದ್ದಕ್ಕೆ ಈ ಮಾತು ಹೇಳುತ್ತಿರುವುದಲ್ಲ.
ಮೋದಿ ಅವರು 140 ಕೋಟಿ ಭಾರತೀಯರು ತಮ್ಮ ಪರಿವಾರ ಎನ್ನುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಏನಾಗುತ್ತಿದೆ. 40 ವರ್ಷದಿಂದ ಜೊತೆ ರಾಜಕೀಯದಲ್ಲಿದ್ದೇನೆ. ಪಕ್ಷ ನನ್ನ ತಾಯಿ ಅನ್ನುತ್ತಿದ್ದೆ. ನನ್ನ ಕಣ್ಣ ಮುಂದೆಯೆ ತಾಯಿಯ ಕುತ್ತಿಗೆ ಹಿಸುಕಿದರೆ ಸುಮ್ಮನಿರಬೇಕ?
ಈಶ್ವರಪ್ಪ ಅವರನ್ನು ಒಪ್ಪಿಸುತ್ತೇನೆ. ಅವರ ಮಗನನ್ನು ಎಂಎಲ್ಸಿ ಮಾಡ್ತೀನಿ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಇದು ಸುಳ್ಳು. ಈಗ ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಿರುವುದನ್ನು ಗಮನಿಸಿದರೆ ಸ್ಪಷ್ಟತೆ ಸಿಗಲಿದೆ. ಈಗ ಟಿಕೆಟ್ ಪಡೆದವರಲ್ಲಿ ಎಷ್ಟು ಮಂದಿ ಗೆಲ್ತಾರೋ, ಸೋಲ್ತಾರೋ ಗೊತ್ತಿಲ್ಲ.
ಈಗ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಬಿಜೆಪಿಯಲ್ಲಿ ಜಾಸ್ತಿ ಧೈರ್ಯ ಇದ್ದರೆ ನೊಟೀಸ್ ಕೊಡಬಹುದು. ಇನ್ನೂ ಧೈರ್ಯವಿದ್ದರೆ ಉಚ್ಛಾಟನೆ ಮಾಡಬಹುದು. ನಾನು ಗೆದ್ದರೆ ಪುನಃ ಪಕ್ಷಕ್ಕೆ ಕರೆದುಕೊಳ್ಳಲಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಆದರೆ ತಮ್ಮದು ಆತುರದ ನಿರ್ಧಾರವಲ್ಲ. ಇದು ಮೋದಿ ವಿರೋಧಿ ನಡೆಯಲ್ಲ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಗಬಾರದು. ಹಿಂದುತ್ವಕ್ಕೆ, ಕಾರ್ಯಕರ್ತರಿಗೆ ಅನ್ಯಾಯವಾಗಬಾರದು ಎಂದು ಈ ನಿರ್ಧಾರ.
ಇದನ್ನೂ ಓದಿ – ಸ್ವತಂತ್ರವಾಗಿ ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ ಈಶ್ವರಪ್ಪ, ನಿರ್ಧಾರಕ್ಕೆ ಕಾರಣವೇನು?