ಶಿವಮೊಗ್ಗದಲ್ಲಿ ಮಳೆ, ಧಗೆ ತಗ್ಗಿಸುತ್ತಾ ಭಾನುವಾರ ಸಂಜೆಯ ವರ್ಷಧಾರೆ?

ಶಿವಮೊಗ್ಗ: ಸಂಜೆ ವೇಳೆಗೆ ಶಿವಮೊಗ್ಗದಲ್ಲಿ ಮಳೆ ಆಗಿದೆ. ಇದರಿಂದ ತಾಪಮಾನ ಇಳಿಕೆಯಾಗಿದ್ದು ವಾತಾವರಣ ತುಸು ತಂಪಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಮೋಡ, ಗಾಳಿ, ಗುಡುಗು

ಕಳೆದ ಕೆಲವು ದಿನದಿಂದ ಶಿವಮೊಗ್ಗದಲ್ಲಿ ತಾಪಮಾನ ಹೆಚ್ಚಾಗಿತ್ತು. ಬಿಸಿಲಿನ ಝಳಕ್ಕೆ ಜನರು ಮನೆಯಿಂದ ಹೊರಗೆ ಬಾರಲಾಗದ ಸ್ಥಿತಿ ಇತ್ತು. ಇನ್ನು, ಧಗೆಯಿಂದ ಮನೆ, ಕಚೇರಿಗಳ ಒಳಗು ಇರಲಾಗದಂತಾಗಿತ್ತು. ಭಾನುವಾರ ಸಂಜೆ ವೇಳೆಗೆ‌ ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಜೋರು ಗಾಳಿ ಸಹಿತ ಗುಡುಗು, ಮಿಂಚು ಇತ್ತು.

ಶಿವಮೊಗ್ಗದಲ್ಲಿ ಮಳೆ. ಸಾಧಾರಣ ಮಳೆಗೆ ತಂಪಾದ ಇಳೆ, ಹಲವೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗದಲ್ಲಿ ಮಳೆ. ಸಾಧಾರಣ ಮಳೆಗೆ ತಂಪಾದ ಇಳೆ, ಹಲವೆಡೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಛತ್ರಿ ಹಿಡಿದು ಬೈಕ್‌ನಲ್ಲಿ ತೆರಳುತ್ತಿರುವ ಸವಾರರು | Shivamogga Live Photo

ಶಿವಮೊಗ್ಗದಲ್ಲಿ ಮಳೆ, ತುಸು ತಂಪಾಯ್ತು ಇಳೆ

ಇನ್ನು, ನಗರದ ವಿವಿಧೆಡೆ ಸಾಧಾರಣ ಮಳೆಯಾಯಿತು. ದಿಢೀರ್‌ ಮಳೆಯಿಂದಾಗಿ ರಸ್ತೆಯಲ್ಲಿದ್ದ ಜನರು ವಿವಿಧ ಕಟ್ಟಡಳ ಕೆಳಗೆ ‍ಆಶ್ರಯ ಪಡೆಯುವಂತಾಯಿತು. ಕೆಲವು ಹೊತ್ತು ಮುಂದುವರೆದ ಮಳೆ ತುಂತುರು ಸುರಿಯಲು ಆರಂಭಿಸಿತು. ಸದ್ಯ ಗಾಳಿ, ಮಳೆಯಿಂದಾಗಿ ಇಳೆ ತಂಪಾಗಿದೆ. ಪ್ರಸ್ತುತ ಶಿವಮೊಗ್ಗ ಸಿಟಿಯಲ್ಲಿ ತಾಪಮಾನ ಇಳಿಕೆಯಾಗಿದ್ದು ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಧಗೆ ಮುಂದುವರಿದಿದೆ.

ಇದನ್ನೂ ಓದಿ : ಥೈಲ್ಯಾಂಡ್‌ನಲ್ಲಿ ಗೆದ್ದ ಶಿವಮೊಗ್ಗದ ಈಜುಪಟುಗಳು, ಯಾರೆಲ್ಲ ಗೆಲುವು ಸಾಧಿಸಿದ್ದಾರೆ?

ಹಲವೆಡೆ ಕರೆಂಟ್ ಕಟ್‌

ಇನ್ನು, ಗಾಳಿ, ಮಳೆ ಆರಂಭವಾಗುತ್ತಿದ್ದಂತೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಹಲವೆಡೆ ಮರದ ರೆಂಬೆಗಳು ತುಂಡಾಗಿ, ತೆಂಗಿನ ಮರಗಳ ಗರಿ ಬಿದ್ದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment