ಶಿವಮೊಗ್ಗ ಸಿಟಿಯಲ್ಲಿ ಮಳೆ, ರಾತ್ರಿಗೆ ಮತ್ತೆ ಅಲರ್ಟ್‌ ಪ್ರಕಟ

ಶಿವಮೊಗ್ಗ: ನಗರದಲ್ಲಿ ಸಂಜೆ ವೇಳೆಗೆ ಮಳೆಯಾಯಿತು. ಗಾಳಿ, ಗುಡುಗು ಸಹಿತ ಕೆಲವು ಹೊತ್ತು ಮಳೆ ಸುರಿಯಿತು. ಇದರಿಂದಾಗಿ ನಗರದಲ್ಲಿ ತಾಪಮಾನ ಸ್ವಲ್ಪ ತಗ್ಗಿದೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ದಟ್ಟ ಮೋಡ ಆವರಿಸಿತು. ಮೊದಲಿಗೆ ವಿವಿಧ ಬಡಾವಣೆಗಳಲ್ಲಿ ಸಾಧಾರಣ ಮಳೆಯಾಯಿತು. ಸ್ವಲ್ಪ ಹೊತ್ತಿನ ಬಳಿಕ ನಗರದಾದ್ಯಂತ ಜೋರು ಮಳೆಯಾಯಿತು. ಅರ್ಧ ಗಂಟೆಗು ಹೆಚ್ಚು ಹೊತ್ತು ಮಳೆ ಸುರಿಯಿತು.

Rainfall-in-Shimoga-city.

Rainfall-in-Shimoga-city.

ಗಾಳಿ, ಮಳೆಯಿಂದಾಗಿ ಶಿವಮೊಗ್ಗ ನಗರದಲ್ಲಿ ತಾಪಮಾನ ತುಸು ತಗ್ಗಿದೆ. ವಾತಾವರಣ ತಂಪಾಗಿದೆ. ಆದರೆ ಕಟ್ಟಡಗಳ ಒಳಗಿನ ಧಗೆ ಮುಂದುವರೆದಿದೆ. ಶಿವಮೊಗ್ಗದಲ್ಲಿ ಸದ್ಯ 27° ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಸದ್ಯ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇನ್ನೊಂದೆಡೆ ರಾತ್ರಿ ಗಾಳಿ ಸಹಿತ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಅಲರ್ಟ್‌ ನೀಡಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌