ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ತಾಂತ್ರಿಕ ದೋಷದಿಂದ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮತದಾನ ಸ್ಥಗಿತವಾಗಿದೆ. ಶಿವಮೊಗ್ಗ ನಗರದ ಬಾಲರಾಜ್‌ ಅರಸ್‌ ರಸ್ತೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಘಟನೆ ಸಂಭವಿಸಿದೆ.

ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಇಂಜಿನಿಯರ್‌ಗಳ ತಂಡ ಮತ ಯಂತ್ರದ ಪರಿಶೀಲನೆ ನಡೆಸಿತು. ತಾಂತ್ರಿಕ ದೋಷದ ಹಿನ್ನೆಲೆ ಮತ ಯಂತ್ರವನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ.

ಈ ಬೂತ್‌ನಲ್ಲಿ ಒಟ್ಟು 935 ಮತಗಳಿವೆ. ಈವರೆಗೂ 542 ಮತ ಚಲಾವಣೆಯಾಗಿದೆ. ಮತ್ತೊಂದುಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಲು ಸರತಿಯಲ್ಲಿ ನಿಂತಿದ್ದಾರೆ.

ಇದನ್ನೂ ಓದಿ – ಮತಗಟ್ಟೆಗೆ ಮೊಬೈಲ್‌ ನಿಷೇಧ, ಆದರೂ ಹೊರ ಬಂತು ಮತ ಚಲಾಯಿಸಿದ ವಿಡಿಯೋ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment