ಟೀಮ್‌ ಇಂಡಿಯಾಗೆ ಶಿವಮೊಗ್ಗದಲ್ಲಿ ಶುಭ ಹಾರೈಕೆ, ವಿವಿಧೆಡೆ ಪ್ರಾರ್ಥನೆ, ನೆಹರು ಸ್ಟೇಡಿಯಂನಲ್ಲಿ ಬೃಹತ್‌ ಪರದೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 19 NOVEMBER 2023

SHIMOGA : ಟೀಂ ಇಂಡಿಯಾ ವಿಶ್ವಕಪ್‌ ಮುಡಿಗೇರಿಸಿಕೊಳ್ಳಲಿ ಎಂದು ಶಿವಮೊಗ್ಗದಲ್ಲಿ ಜನ ಹಾರೈಸಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಟೀಮ್‌ ಇಂಡಿಯಾಗೆ ಆಲ್‌ ದಿ ಬೆಸ್ಟ್‌ ತಿಳಿಸಿದ್ದಾರೆ. ಭಾರತಾಂಬೆ ಫೋಟೊಗೆ ಪೂಜೆ ಸಲ್ಲಿಸಿದರು.

ಟೀಮ್‌ ಇಂಡಿಯಾಗಾಗಿ ಪೂಜೆ, ಪ್ರಾರ್ಥನೆ

ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಟೀಮ್‌ ಇಂಡಿಯಾ ವಿಶ್ವಕಪ್‌ ಮುಡಿಗೇರಿಸಿಕೊಳ್ಳಬೇಕು ಎಂದು ಜಿಲ್ಲೆಯಾದ್ಯಂತ ಪೂಜೆ ಪ್ರಾರ್ಥನೆಗಳು ನಡೆಯುತ್ತಿವೆ. ನಗರದ ಹಜರತ್‌ ಸೈಯದ್‌ ಷಾ ಆಲೀಂ ದಿವಾನ್‌ ಶಾ ಖಾದ್ರಿ ದರ್ಗಾದಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹೂವಿನ ಚಾದರ ಹೊದಿಸಿ ಭಾರತ ಜಯಶಾಲಿಯಾಗಲಿ ಎಂದು ಪ್ರಾರ್ಥನೆ ನೆರವೇರಿಸಿ ಘೋಷಣೆ ಕೂಗಿದರು. ಪಂದ್ಯಾವಳಿ ಹಿನ್ನೆಲೆ ಭಾನುವಾರ ವಿವಿಧೆಡೆ ಅಭಿಮಾನಿಗಳು ಪೂಜೆ ಆಯೋಜಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ | ನಗರದಲ್ಲಿ ಭಾವನೋತ್ಸವ | ದೇಗುಲ ಸಮಿತಿ ಸದಸ್ಯರ ಸಭೆ ಮುಂದಕ್ಕೆ |

ಪಂದ್ಯ ವೀಕ್ಷಣೆಗೆ ಬೃಹತ್‌ ಪರದೆ

ಜಿಲ್ಲಾ ಕ್ರೀಡಾಂಗಣಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಲಾಗಿದೆ. ಮಧ್ಯಾಹ್ನ 1.30ರಿಂದ ಪಂದ್ಯ ಮುಗಿಯುವವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ತಿಳಿಸಿದಾರೆ.

ಇನ್ನು, ಜಿಲ್ಲೆಯಾದ್ಯಂತ ವಿವಿಧೆಡೆ ಪಂದ್ಯ ವೀಕ್ಷಣೆಗೆ ಬೃಹತ್‌ ಪರದೆಗಳನ್ನು ಅಳವಡಿಸಲಾಗಿದೆ.

Wishes for Team India

Wishes for Team India

Muslim Prayer for Team India to win world cup

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment