SHIVAMOGGA LIVE NEWS | 18 FEBRURARY 2023
SHIMOGA : ಜಮೀನು ಕಳೆದುಕೊಂಡ ರೈತರಿಗೆ ನಿವೇಶನ ಒದಗಿಸದೆ ವಿಮಾನ ನಿಲ್ದಾಣ (Airport) ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನು ಖಂಡಿಸಿ ಕುಟುಂಬ ಸಹಿತ ದನ, ಕರುಗಳು ಕರೆದುಕೊಂಡು ವಿಮಾನ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ಹೋರಾಟ ಸಮಿತಿಯ ಕೃಷ್ಣಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂತ್ರಸ್ತರು, ಫೆ.21ರಂದು ಸಾವಿರಾರು ಜನರು, ದನ, ಕರುಗಳನ್ನು ಹೊಡೆದುಕೊಂಡು ಬಂದು ವಿಮಾನ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ – ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಮತ್ತೆ ಶುರುವಾಯ್ತು ಚರ್ಚೆ, ಹೋರಾಟ, ಯಾರೆಲ್ಲರ ಹೆಸರು ಮುನ್ನೆಲೆಗೆ ಬಂದಿದೆ?
ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ನಿವೇಶನ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈತನಕ ಭರವಸೆ ಈಡೇರಿಲ್ಲ. ಈಚೆಗೆ ಸಂಸದರು, ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಹಕ್ಕು ಪತ್ರ ಕೊಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಗೃಹ ಮಂಡಳಿಯವರು ಸರ್ಕಾರದಿಂದ 34 ಕೋಟಿ ರೂ. ನೀಡದ ಹೊರತು ನಿವೇಶನ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅವರನ್ನು ಭೇಟಿಯಾದರೆ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿವೇಶನ ವಂಚಿತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವಾರ ಅತ್ಯಂತ ಮಹತ್ವದ್ದು, ಕಾರಣವೇನು? ಮೊದಲು ಲ್ಯಾಂಡ್ ಆಗುವ ವಿಮಾನ ಯಾವುದು?