SHIVAMOGGA LIVE NEWS | 21 FEBRURARY 2023
SHIMOGA : ಕಾಲೇಜು ವಿದ್ಯಾರ್ಥಿಗಳ ಕನ್ನಡ ಪ್ರೇಮವನ್ನು ಬಿಂಬಿಸುವ ಕ್ಯಾಂಪಸ್ ಕ್ರಾಂತಿ ಸಿನಿಮಾ (film) ಫೆ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದರ ಪ್ರಮೋಷನ್ ಗಾಗಿ ಚಿತ್ರತಂಡ ಶಿವಮೊಗ್ಗಕ್ಕೆ ಆಗಮಿಸಿತ್ತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮತ್ತು ನಿರ್ಮಾಪಕ ಸಂತೋಷ್ ಕುಮಾರ್, ಗಡಿಭಾಗದಲ್ಲಿ ಕನ್ನಡದ ಸಮಸ್ಯೆಯನ್ನು ಸಿನಿಮಾ ಪ್ರತಿಬಿಂಬಿಸಲಿದೆ. ಕಾಲೇಜು ವಿದ್ಯಾರ್ಥಿಗಳು ಕ್ರಾಂತಿ ಸೃಷ್ಟಿಸುವ ಸಿನಿಮಾ (film) ಇದಾಗಿದೆ. ಗಡಿಭಾಗದ ರಾಂಪುರ ಎಂಬ ಕಾಲ್ಪನಿಕ ಊರಿನಲ್ಲಿ 21 ವರ್ಷದಿಂದ ರಾಜ್ಯೋತ್ಸವ ಆಚರಣೆ ನಿಂತಿರುತ್ತದೆ. ಅದನ್ನು ಪುನಾರಂಭ ಮಾಡಲಾಗುತ್ತೆದೆ. ವಿದ್ಯಾರ್ಥಿಗಳು ಹೇಗೆ ಆಚರಣೆ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿದೆ ಎಂದರು.
ನಾಯಕ ನಟ ಆರ್ಯ, ನಟಿ ಈಶಾನಾ ಮಾತಾಡಿ, ಇದು ಕೌಟುಂಬಿಕ ಸಿನಿಮಾ. ಎಲ್ಲರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಟಿ ಪ್ರೇಮಾ, ‘ಶ್ರೀಗಂಧದ ಗೊಂಬೆ’ಯ ಹಾಡಿಗೆ ಜನರು ಫಿದಾ, ಸೆಲ್ಫಿಗೆ ಮುಗಿಬಿದ್ದ ಪ್ರೇಕ್ಷಕರು
ಪುನೀತ್ ರಾಜಕುಮಾರ್ ಅಭಿನಯದ ಬಿಂದಾಸ್, ಯಶ್ ನಟಿಸಿದ್ದ ಗೂಗ್ಲಿ ಚಿತ್ರಗಳನ್ನು ಸಂತೋಷ್ ಕುಮಾರ್ ಅವರು ನಿರ್ದೇಶಿಸಿದ್ದರು. ಕ್ಯಾಂಪಸ್ ಕ್ರಾಂತಿ ಸಿನಿಮಾಗೆ ಅವರೆ ಆಕ್ಷನ್ ಕಟ್ ಹೇಳಿದ್ದಾರೆ. ವಿ.ಮನೋಹರ್ ಸಂಗೀತ, ಫ್ಯಾಷನ್ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ನಟರಾದ ಕೀರ್ತಿರಾಜ್, ವಾಣಿಶ್ರೀ, ನಂದಗೋಪಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ.
ನಟ ರಣವೀರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಇದ್ದರು.