ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ಹುಣಸೋಡು, ಕಲ್ಲು ಗಂಗೂರು ಗ್ರಾಮದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಸಂಬಂಧ ಜನವರಿ 29ಕ್ಕೆ ಅಂತಿಮ ವಿಚಾರಣೆ ಇತ್ತು. ಅಷ್ಟರಲ್ಲಿ ಈ ಘೋರ ಅವಘಡ ಸಂಭವಿಸಿದೆ.
ಕಲ್ಲು ಗಂಗೂರು ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಅದೆ ಗ್ರಾಮದ ಸಂದೀಪ್ ಎಂಬುವವರು ಲೋಕಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಈ ತಿಂಗಳ ಕೊನೆಯಲ್ಲಿ ಅಂತಿಮ ವಿಚಾರಣೆ ನಡೆಯಬೇಕಿದೆ.
ಜವಾಬ್ದಾರಿ ಹೊರಲು ಸಿದ್ಧವಿಲ್ಲ
ಅಕ್ರಮ ಕಲ್ಲು ಗಣಿಗಾರಿಗೆ ವಿರುದ್ಧ ಪೊಲೀಸರಿಗೆ ದೂರು ನೀಡಿದರೆ, ಖನಿಜ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡುವಂತೆ ತಿಳಿಸುತ್ತಾರೆ. ಆ ಇಲಾಖೆಗೆ ದೂರು ನೀಡಿದರೆ ಮತ್ತೊಬ್ಬರ ಮೇಲೆ ಜವಾಬ್ದಾರಿ ಹೊರಿಸುತ್ತಾರೆ. ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸುತ್ತಾರೆ. ಆದರೆ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂದೀಪ್ ದೂರುತ್ತಾರೆ.
ಲೋಕಾಯುಕ್ತಕ್ಕೆ ದೂರು
ಸಂದೀಪ್ ಅವರು 2013ರಲ್ಲಿ ಲೋಕಯುಕ್ತಕ್ಕೆ ದೂರು ನೀಡಿದ್ದರು. ಅಕ್ರವಾಗಿ ಗಣಿಗಾರಿಕೆ ನಡೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು. ಆದರೆ ಈ ವೇಳೆಗೆ ಅಧಿಕಾರಿಗಳು ಸಂದೀಪ್ ಅವರನ್ನು ಭೇಟಿಯಾಗಿ ದೂರು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ತಮ್ಮ ಪ್ರಮೋಷನ್ಗೆ ತೊಂದರೆ ಆಗಲಿದೆ ಎಂದು ಅಧಿಕಾರಿಗಳು ನೆಪವೊಡ್ಡಿದ್ದರು ಎಂದು ಸಂದೀಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯ ಜನರಲ್ಲಿ ಆತಂಕ
ಗಣಿಗಾರಿಕೆ ನಡೆಸುತ್ತಿರುವವರಿಗೆ ರಾಜಕೀಯ ಪ್ರಭಾವವಿದೆ. ಇದೆ ಕಾರಣಕ್ಕೆ ಗಣಿಗಾರಿಕೆ ನಡೆಸುವವರ ವಿರುದ್ಧ ದೂರು ನೀಡಲು ಹೆದರುತ್ತಿದ್ದಾರೆ ಅನ್ನುವ ಸಂದೀಪ್, ತಮ್ಮ ಮನೆಯಲ್ಲೂ ಇದೆಲ್ಲ ಬೇಡ ಸುಮ್ಮನಿರು ಎಂದು ಹೇಳುತ್ತಿದ್ದಾರೆ ಎಂದು ತಿಳಿಸುತ್ತಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422