ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 AUGUST 2023
SHIMOGA : ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿಕೃತ್ತಿಕೆ ಜಾತ್ರೆಗೆ (Harohara Jathre) ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆ ಹರಕೆ ತೀರಿಸುವುದು, ದೇವರ ದರ್ಶನ, ಪ್ರಸಾದ ಸೇವನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆ.8 ಮತ್ತು 9ರಂದು ಜಾತ್ರೆ ನಡೆಯಲಿದೆ.

ನಿರಂತರ ಪೂಜೆ, ಪ್ರಸಾದಕ್ಕೆ ವ್ಯವಸ್ಥೆ
ಗುಡ್ಡೇಕಲ್ ದೇಗುಲದಲ್ಲಿ ಜಾತ್ರೆ ಸಂದರ್ಭ ನಿರಂತರ ಪೂಜೆ ನಡೆಯಲಿದೆ. ಇದಕ್ಕಾಗಿ ದೇಗುಲದ ಅಡಳಿತ ಮಂಡಳಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಭಕ್ತರು ದೇವರ ದರ್ಶನ ಪಡೆದು, ಪೂಜೆ ಮುಗಿಸಿ ಸುರಕ್ಷಿತವಾಗಿ ನಿರ್ಗಮಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆ ಸ್ಥಳವನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ – ಗುಡ್ಡೇಕಲ್ ಜಾತ್ರೆ, ಕಾವಡಿ, ತ್ರಿಶೂಲ ಹರಕೆ ತೀರಿಸುವವರಿಗೆ ಜೆಲ್ಲಿಯ ಸಮಸ್ಯೆ, ಪರಿಹಾರ ಮಾಡ್ತಾರಾ ಅಧಿಕಾರಿಗಳು?

ವಿವಿಧ ಮಳಿಗೆ, ಹಲವು ಆಟಿಕೆ
ಜಾತ್ರೆಗಾಗಿ ಹಲವು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ದೇವಸ್ಥಾನದ ಎದುರಿನ ರಸ್ತೆ, ಪುರಲೆ ಮುಖ್ಯ ರಸ್ತೆ, ನಿರ್ಮಾಣ ಹಂತದ ಸೇತುವೆಯ ಕೆಳಗೆ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಂಡಕ್ಕಿ ಖಾರ, ವಿವಿಧ ತಿಂಡಿ ತಿನಿಸು, ಆಟಿಕೆ, ಅಲಂಕಾರಿಕಾ ವಸ್ತುಗಳು, ನಾವೆಲ್ಟಿ ಅಂಗಡಿಗಳನ್ನು ಸ್ಥಾಪಿಸಲಾಗಿದೆ. ಗ್ರಾಹಕರನ್ನು ಸೆಳೆಯಲು ಅಂಗಡಿ ಮಾಲೀಕರು ವಸ್ತುಳನ್ನು ಕಣ್ಣಿಗೆ ರಾಚುವಂತೆ ಇರಿಸಿದ್ದಾರೆ. ಇನ್ನು, ಜಾತ್ರೆಗೆ (Harohara Jathre) ಬರುವವರು ಆಟವಾಡಲು ವಿವಿಧ ಆಟಿಕೆಗಳು ಇದ್ದಾವೆ.
ಇದನ್ನೂ ಓದಿ – ಮಲೇಷಿಯಾ, ಸೇಲಂಗಿಂತಲು ಶಿವಮೊಗ್ಗದಲ್ಲಿ ಅತಿ ಎತ್ತರದ ಪ್ರತಿಮೆ, ಹೇಗಿರುತ್ತೆ? ಇಲ್ಲಿದೆ 7 ಪ್ರಮುಖ ವಿಶೇಷತೆ
ಬಿಗಿ ಪೊಲೀಸ್ ಬಂದೋಬಸ್ತ್
ಆಡಿಕೃತ್ತಿಕೆ ಜಾತ್ರೆಗೆ ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆ ಜನರನ್ನು ನಿಯಂತ್ರಿಸಲು ಮತ್ತು ಅಹಿತಕರ ಘಟನೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗುಡ್ಡೇಕಲ್ ದೇವಸ್ಥಾನದಲ್ಲಿ ಇವತ್ತಿನಿಂದ ಪೊಲೀಸರ ನಿಯೋಜನೆಯಾಗಿದೆ. ಇನ್ನು, ದೇವಸ್ಥಾನ ಸಮಿತಿ ವತಿಯಿಂದ 400ಕ್ಕೂ ಅಧಿಕ ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿದೆ.
.jpeg)
LATEST NEWS
- ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





