ಶಿವಮೊಗ್ಗದ ರಿಂಗ್‌ ರಸ್ತೆಯಲ್ಲಿ ಬೈಕ್‌ ಸ್ಟಂಟ್‌, ಚಾಲಕನನ್ನು ಪತ್ತೆ ಹಚ್ಚಿ ಭಾರಿ ದಂಡ ಕಟ್ಟಿಸಿದ ಟ್ರಾಫಿಕ್‌ ಪೊಲೀಸ್‌

SHIVAMOGGA LIVE NEWS | 12 JANUARY 2024

SHIMOGA : ವೀಲಿಂಗ್‌ ಮಾಡುತ್ತ ಅಪಾಯಕಾರಿ ಸ್ಥಿತಿಯಲ್ಲಿ ಬೈಕ್‌ ಚಲಾಯಿಸಿದ ಮತ್ತೊಬ್ಬ ಯುವಕನಿಗೆ ಶಿವಮೊಗ್ಗ ನ್ಯಾಯಾಲಯ ದಂಡ ವಿಧಿಸಿದೆ. ತಾಲೂಕಿನ ಪುರದಾಳು ಸಮೀಪ ರಿಂಗ್‌ ರಸ್ತೆಯಲ್ಲಿ ಯುವಕನೊಬ್ಬ ಬೈಕ್‌ ವೀಲಿಂಗ್‌ ಮಾಡಿದ ವಿಡಿಯೋ ಪಶ್ಚಿಮ ಸಂಚಾರ ಪೊಲೀಸರಿಗೆ ಲಭ್ಯವಾಗಿತ್ತು.

ಪಶ್ಚಿಮ ಸಂಚಾರ ಠಾಣೆಯ ಹೆಚ್‌.ಸಿ. ಸಂದೀಪ್‌ ಬೈಕ್‌ ಮತ್ತು ಚಾಲಕನನ್ನು ಪತ್ತೆ ಹಚ್ಚಿದ್ದರು. ಪಿಎಸ್‌ಐ ತಿರುಮಲೇಶ್‌, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್‌ ಚಾಲಕನಿಗೆ 11,500 ರೂ. ದಂಡ ವಿಧಿಸಿದೆ.

ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್‌

Kalleshwara-Enterprises.webp

ಶಿವಮೊಗ್ಗ ನಗರದಲ್ಲಿ ಬೈಕ್‌ ವೀಲಿಂಗ್‌ ಮತ್ತು ಸ್ಟಂಟ್‌ ಮಾಡುವವರ ಸಂಖ್ಯೆ ಹೆಚ್ಚಿತ್ತು. ಸಂಚಾರ ಪೊಲೀಸರು ಇಂತಹವರನ್ನು ಪತ್ತೆ ಹಚ್ಚಿ, ದಂಡ ವಿಧಿಸುತ್ತಿದ್ದಾರೆ. ಹಾಗಾಗಿ ನಗರ ವ್ಯಾಪ್ತಿಯಲ್ಲಿ ವೀಲಿಂಗ್‌ ಹಾವಳಿ ತಗ್ಗಿದೆ. ಹೊರವಲಯದಲ್ಲಿ ಬೈಕ್‌ ಸ್ಟಂಟ್‌ ಮಾಡುತ್ತಿದ್ದರು. ಈಗ ರಿಂಗ್‌ ರಸ್ತೆಯಲ್ಲಿ ಸ್ಟಂಟ್‌ ಮಾಡಿದವರನ್ನು ಪತ್ತೆ ಹಚ್ಚಿ ಭಾರಿ ದಂಡ ಕಟ್ಟಿಸಿದ್ದಾರೆ. ನಗರದ ವಿವಿಧೆಡೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನು, ಸಾರ್ವಜನಿಕರು ಕೂಡ ಸಂಚಾರ ಪೊಲೀಸರೊಂದಿಗೆ ವಿಡಿಯೋ, ಫೋಟೊ ಷೇರ್‌ ಮಾಡುತ್ತಿದ್ದಾರೆ. ಹಾಗಾಗಿ ನಿಯಮ ಉಲ್ಲಂಘಿಸಿದರೆ ದಂಡ ತೆತ್ತುವುದು ಅನಿವಾರ್ಯವಾಗುತ್ತದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್‌ ವೀಲಿಂಗ್‌, ಯುವಕನಿಗೆ ಭಾರಿ ದಂಡ, ಪಕ್ಕದ ಬೈಕ್‌ನವನ ಮೇಲೂ ಬಿತ್ತು ಕೇಸ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment