ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 5 FEBRUARY 2024
SHIMOGA : ಮೊಬೈಲ್‌ನಲ್ಲಿ ಮಾತನಾಡುತ್ತ ಸಿಟಿ ಬಸ್ ಚಲಾಯಿಸುತ್ತಿದ್ದ ಚಾಲಕನ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಂಚಾರ ಠಾಣೆ ಪೊಲೀಸರಿಗೆ ಕಳುಹಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರು ಚಾಲಕನಿಗೆ ದಂಡ ವಿಧಿಸಿದ್ದಾರೆ.
ಗೋಪಾಳ – ರಾಗಿಗುಡ್ಡ ಮಾರ್ಗದ ಸಿಟಿ ಬಸ್ಸಿನ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಗೋಪಾಳದಿಂದ ಅಣ್ಣಾನಗರ ಚಾನಲ್‌ವರೆಗೂ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದ. ಹಿಂಬದಿ ಸೀಟಿಯಲ್ಲಿ ಕುಳಿತ ಪ್ರಯಾಣಿಕರೊಬ್ಬರು ಇದರ ವಿಡಿಯೋ ಚಿತ್ರೀಕರಣ ಮಾಡಿ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಅವರಿಗೆ ಕಳುಹಿಸಿದ್ದರು.
ಸಂಚಾರ ಠಾಣೆ ಸಿಬ್ಬಂದಿ ಸಂದೀಪ್, ಚಾಲಕನನ್ನು ಪತ್ತೆ ಹಚ್ಚಿದರು. ಮೊಬೈಲ್ ಮಾತನಾಡುತ್ತ ಬಸ್ ಚಲಾಯಿಸಿದ್ದಕ್ಕೆ 5 ಸಾವಿರ ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಸಿಟಿ ಬಸ್‌ಗೆ ಮಾರುದ್ದದ ದಂಡದ ರಶೀದಿ ಕೊಟ್ಟ ಟ್ರಾಫಿಕ್ ಪೊಲೀಸ್, ಕಟ್ಟಿದ ಫೈನ್ ಎಷ್ಟು?






