ಶಿವಮೊಗ್ಗ ನಗರದ ವಿವಿಧೆಡೆ ಐದು ದಿನ ಕುಡಿಯುವ ನೀರು ಪೂರೈಕೆ ವ್ಯತ್ಯಯ, ಎಲ್ಲೆಲ್ಲಿ ಸಮಸ್ಯೆ ಉಂಟಾಗಬಹುದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಆಗಸ್ಟ್ 2021

ಶಿವಮೊಗ್ಗ ನಗರದ ವಿವಿಧೆಡೆ ಐದು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದ ಜಾಕ್‍ವೆಲ್‍ನಲ್ಲಿ ಟರ್ಬೈನ್ ಬದಲಾವಣೆ ಮಾಡಲಾಗುತ್ತಿದೆ. 150 ಹೆಚ್.ಪಿ ಪಂಪ್ ಅಳವಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 27ರಿಂದ 31ರವರೆಗೆ ನೀರು ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ನಿರ್ವಹಣೆ ಮತ್ತು ಪಾಲನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.

ಎಲ್ಲೆಲ್ಲಿ ನೀರು ವ್ಯತ್ಯಯವಾಗಲಿದೆ?

ಕೊಳವೆ ಮಾರ್ಗ 1,2,3 ಮತ್ತು 6 ರಿಂದ ನೀರು ಸರಬರಾಜಾಗುವ ಗೋಪಾಳಗೌಡ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ, ಅಪ್ಪಾಜಿರಾವ್ ಕಾಂಪೌಂಡ್, ಸರ್ಕಾರಿ ಶಾಲೆ, ಕಾರ್ಪೋರೇಷನ್, ಬಿ.ಬಿ.ಸ್ಟ್ರೀಟ್, ಮಲ್ಲೇಶ್ವರ ನಗರ, ಮೆಗ್ಗಾನ್ ಆಸ್ಪತ್ರೆ, ಬಸ್ಟ್ಯಾಂಡ್, ಕಲ್ಲಹಳ್ಳಿ, ವಿನೋಬನಗರ, ಆಲ್ಕೋಳ, ಎಪಿಎಂಸಿ, ನರಸಿಂಹ ಬಡಾವಣೆ, ಕುವೆಂಪು ರಸ್ತೆ, ಬೂಸ್ಟರ್ ಪಂಪ್‍ಹೌಸ್ ಆವರಣ, ಕಾರ್ಪೋರೇಷನ್ ಟ್ಯಾಂಕ್ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ADVT JULY NANJAPPA HOSPITAL HOME LAB TESTING

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment