SHIVAMOGGA LIVE NEWS
ಶಿವಮೊಗ್ಗ| ಒಂದೆಡೆ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ನಗರದಲ್ಲಿ (SHIMOGA CITY) ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ (144 SECTION) ಜಾರಿಗೊಳಿಸಲಾಗಿದೆ. ಈ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಮಹಾನಗರ ಪಾಲಿಕೆಗೇ ಗೊತ್ತಿಲ್ಲದೆ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್ (FLEX CONTROVERSY) ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಾನಗರ ಪಾಲಿಕೆ ಹೆಸರಿನಲ್ಲಿ ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಈ ಫ್ಲೆಕ್ಸ್ ಅಳವಡಿಸಿದ್ದು ಯಾರು ಅನ್ನವುದು ಪಾಲಿಕೆಗೆ ಗೊತ್ತಿಲ್ಲ. ಹಾಗಾಗಿ ಪರಿಶೀಲನೆ ಕಾರ್ಯ ಆರಂಭಿಸಲಾಗಿದೆ.
ಅಷ್ಟಕ್ಕೂ ಫ್ಲೆಕ್ಸ್ ನಲ್ಲಿ ಏನಿತ್ತು?
ಗೋಪಿ ಸರ್ಕಲ್’ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಶುಭ ಕೋರುವ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದರಲ್ಲಿ 40 ಹೋರಾಟಗಾರರ ಭಾವಚಿತ್ರ ಇತ್ತು. ಭಾರತದ ಬಾವುಟದ ರಚನೆಕಾರ ಪಿಂಗಾಳಿ ವೆಂಕಯ್ಯ ಅವರ ದೊಡ್ಡ ಭಾವಚಿತ್ರ, ತ್ರಿವರ್ಣ ಧ್ವಜ ಹಿಡಿದು ನಿಂತಿರುವ ಭಾರತ ಮಾತೆಯ ಫೋಟೋ ಕೂಡ ಫ್ಲೆಕ್ಸ್ ನಲ್ಲಿತ್ತು.
ಫ್ಲೆಕ್ಸ್ ನ ಎಡ ಭಾಗದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಹೆಸರು ಮತ್ತು ಲೋಗೋ ಬಳಕೆ ಮಾಡಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಲೋಗೋ ಮತ್ತು ಮಹಾನಗರ ಪಾಲಿಕೆ ಕಟ್ಟಡದ ಫೋಟೊವನ್ನು ಕೂಡ ಅಳವಡಿಸಲಾಗಿತ್ತು. ಇದರ ಕೆಳಗೆ ಮಹಾಪೌರರು, ಉಪ ಮಹಾಪೌರರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಆಯುಕ್ತರು ಮತ್ತು ಸಿಬ್ಬಂದಿ ಎಂದು ಬರೆಯಲಾಗಿತ್ತು.
ಫ್ಲೆಕ್ಸ್ ವಿಚಾರ ಪಾಲಿಕೆಗೇ ಗೊತ್ತಿಲ್ಲವಂತೆ..!
ಆಗಸ್ಟ್ 15ರಂದು ಅಮೀರ್ ಅಹಮದ್ ಸರ್ಕಲ್’ನಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಗೊಂದಲ ಉಂಟಾಯಿತು. ಆ ಬಳಿಕ ಮಹಾನಗರ ಪಾಲಿಕೆ ವತಿಯಿಂದ ರಾತ್ರೋರಾತ್ರಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಗೋಪಿ ಸರ್ಕಲ್’ನಲ್ಲಿ ಮಹಾನಗರ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಇದನ್ನ ಕಂಡು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ಹೌಹಾರಿದ್ದಾರೆ.
ಪರಿಶೀಲನೆ ಆರಂಭಿಸಿದ ಪಾಲಿಕೆ
ಪಾಲಿಕೆ ಹೆಸರಿನಲ್ಲಿ ಪಾಲಿಕೆಗೆ ಗೊತ್ತಿಲ್ಲದಂತೆ ಫ್ಲೆಕ್ಸ್ ಅಳವಡಿಸಿದ್ದು ಯಾರು ಎಂಬ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂಗೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ ನೀಡಿದ್ದಾರೆ. ಪಾಲಿಕೆ ಸದಸ್ಯರಲ್ಲಿ ಯಾರಾದರೂ ಇದನ್ನು ಅಳವಡಿಸಿದ್ದಾರೆಯೆ ಎಂದು ಪರಿಶೀಲಿಸಲಾಗುತ್ತಿದೆ. ಒಂದು ವೇಳೆ ಪಾಲಿಕೆ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಪ್ರಕರಣ ದಾಖಲು ಮಾಡಲು ಕೂಡ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಸದ್ಯ ಶಿವಮೊಗ್ಗ ಮಹಾನಗರ ಪಾಲಿಕೆ ಹೆಸರನ್ನು ಬಳಸಿಕೊಂಡು, ಪಾಲಿಕೆಗೆ ಗೊತ್ತಿಲ್ಲದೆ ಫ್ಲೆಕ್ಸ್ ಅಳವಡಿಸಿರುವುದು ಚರ್ಚೆಗೆ ಕಾರಣವಾಗಿದೆ. ಮುಂದೆ ಪಾಲಿಕೆ ಹೆಸರನ್ನು ಯಾರಾದರೂ ದರ್ಬಳಕೆ ಮಾಡಿಕೊಂಡರೆ ಹೊಣೆ ಯಾರು ಎಂಬ ಪ್ರಶ್ನೆಯು ಉದ್ಭವವಾಗಿದೆ.
ಇದನ್ನೂ ಓದಿ – ಕೈದಿ ನೋಡಲು ಶಿವಮೊಗ್ಗ ಜೈಲಿಗೆ ಬಂದಿದ್ದ ಸ್ನೇಹಿತರು ಜೈಲುಪಾಲು, ಜೀನ್ಸ್ ಪ್ಯಾಂಟು, ಶರ್ಟ್ ಕಾರಣ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.