ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 OCTOBER 2023
SHIMOGA : ಬೆಂಗಳೂರು – ಶಿವಮೊಗ್ಗ ಇಂಡಿಗೋ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (AIRPORT) ಲ್ಯಾಂಡ್ ಆಗಲು ಸಾಧ್ಯವಾಗದೆ ಬೆಂಗಳೂರಿಗೆ ಹಿಂತಿರುಗಿದೆ. ಭಾನುವಾರ ಘಟನೆ ನಡೆದಿದೆ.
ಲ್ಯಾಂಡ್ ಆಗದಿರಲು ಕಾರಣವೇನು?
ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಪ್ರದೇಶದಲ್ಲಿ ಭಾನುವಾರ ಮಳೆಯಾಗುತ್ತಿತ್ತು. ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಟ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಲುಪಿತ್ತು. ಆದರೆ ಪೈಲೆಟ್ಗೆ ರನ್ ವೇ ವಿಸಿಬಲಿಟಿ (ರನ್ ವೇ ಸ್ಪಷ್ಟವಾಗಿ ಕಾಣದಿರುವುದು) ಸರಿಯಾಗಿ ಇಲ್ಲದ ಹಿನ್ನಲೆ ನಾಲ್ಕು ಬಾರಿ ಲ್ಯಾಂಡಿಂಗ್ಗೆ ಪ್ರಯತ್ನ ಮಾಡಿದ್ದಾರೆ.
ಲ್ಯಾಂಡಿಂಗ್ ಪ್ರಯತ್ನ ವಿಫಲವಾದ ಹಿನ್ನೆಲೆ ವಿಮಾನ ಬೆಂಗಳೂರಿಗೆ ಹಿಂತಿರುಗಿತ್ತು. ಬೆಳಗ್ಗೆ 11.51ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.
ಇದನ್ನೂ ಓದಿ – ಶಿವಮೊಗ್ಗದಿಂದ ಕನೆಕ್ಟಿಂಗ್ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್, ಕೆಲವೆ ತಿಂಗಳಲ್ಲಿ ಬರಲಿದೆ ವಂದೇ ಭಾರತ್ ಎಕ್ಸ್ಪ್ರೆಸ್
ಹಾವಾಮಾನ ವೈಪರಿತ್ಯದಿಂದ ವಿಮಾನಗಳು ಡೈವರ್ಟ್ ಆಗುವುದು, ಕ್ಯಾನ್ಸಲ್ ಆಗುವುದು ಸಾಮಾನ್ಯ. ಪೈಲೆಟ್ಗಳಿಗೆ ರನ್ ವೇ ಸಂಪೂರ್ಣ ಮತ್ತು ಸ್ಪಷ್ಟವಾಗಿ ಕಾಣದ ಹೊರತು ವಿಮಾನಗಳನ್ನು ಲ್ಯಾಂಡ್ ಮಾಡುವುದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಆರಂಭವಾದ ಬಳಿಕ ಇದೆ ಮೊದಲ ಬಾರಿ ವಿಮಾನ ಲ್ಯಾಂಡ್ ಆಗಲು ಸಾಧ್ಯವಾದೆ ಬೆಂಗಳೂರಿಗೆ ಡೈವರ್ಟ್ ಆಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422