SHIVAMOGGA LIVE | 29 JUNE 2023
SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ಉಡಾನ್ ಯೋಜನೆ ಅಡಿ ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗದಲ್ಲಿ (4 new route) ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆಗಸ್ಟ್ 11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಶುರುವಾಗಲಿದೆ. ಈ ಸಂಬಂಧ ಇಂಡಿಗೋ ಸಂಸ್ಥೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ನಾಲ್ಕು ಹೊಸ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ.
ಇನ್ನೂ 4 ಮಾರ್ಗಕ್ಕೆ ಅನುಮತಿ
ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟ ಶುರು ಮಾಡುವ ಮೊದಲೆ ಕೇಂದ್ರ ಸರ್ಕಾರ ಇನ್ನೂ ನಾಲ್ಕು ಮಾರ್ಗಗಳಿಗೆ ಅನಮತಿ ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ರೂಟ್ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್
ರೂಟ್ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್
ರೂಟ್ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್
ರೂಟ್ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು
ಉಡಾನ್ 5.0 ಯೋಜನೆಯಲ್ಲಿ ಮಾರ್ಗ
ಶಿವಮೊಗ್ಗ ವಿಮಾನ ನಿಲ್ದಾಣವು ಉಡಾನ್ 5.0 ಯೋಜನೆ ಅಡಿಯಲ್ಲಿ ಬರಲಿದೆ. ಇದೆ ಯೋಜನೆ ಅಡಿ ಹೊಸದಾಗಿ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಸದ್ಯಕ್ಕೆ ಫಿಕ್ಸೆಡ್ ವಿಂಗ್ಸ್ ವಿಮಾನಗಳಿಗೆ ಮಾತ್ರ ಈ ಮಾರ್ಗದಲ್ಲಿ ಹಾರಾಟಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ – ಇಂಡಿಗೊ ವಿಮಾನಯಾನ ಸಂಸ್ಥೆ ವೆಬ್‌ಸೈಟ್‌ನಲ್ಲಿ ಶಿವಮೊಗ್ಗದ ಹೆಸರು | ಶಿವಮೊಗ್ಗ FMನಲ್ಲಿ ಶಾಸಕರ ಜೊತೆ ಫೋನ್ ಇನ್
ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಜನರಲ್ಲಿ ಪುನಃ ಕುತೂಹಲ ಮೊಳಕೆಯೊಡೆದಿದೆ. ದೇಶದ ನಾನಾ ಭಾಗಕ್ಕೆ ಇಲ್ಲಿಂದ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ಜನರ ನಿರೀಕ್ಷೆ ಹೆಚ್ಚಿಸಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200