ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 FEBRUARY 2024
SHIMOGA : ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಸತತ ಮೂರನೆ ದಿನವು ವಿಶೇಷ ಗಸ್ತು ನಡೆಸಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು 52 ಲಘು ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು?
ಶಿವಮೊಗ್ಗದ ಶೇಷಾದ್ರಿಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಕೆಇಬಿ ವೃತ್ತ, ಹೊಳೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಸವನಗುಡಿ, ಎ.ಎನ್.ಕೆ ರಸ್ತೆ, ಜಯನಗರ, ಉಷಾ ವೃತ್ತ, ರವೀಂದ್ರ ನಗರ, ವೆಂಕಟೇಶ್ ನಗರ, ರಾಜೇಂದ್ರ ನಗರ, ರಾಗಿಗುಡ್ಡ. ಭದ್ರಾವತಿಯ ಜಿಂಕ್ ಲೈನ್, ವೇಲೂರ್ ಶೆಡ್, ಮೋಮೀನ್ ಮೊಹಲ್ಲಾ, ರಂಗಪ್ಪ ವೃತ್ತ, ಹನುಮಂತ ನಗರ, ಉಜನಿಪುರ ವೃತ್ತ, ಅರಳಿಹಳ್ಳಿ, ನಂಜಾಪುರ, ಜಂಬರಘಟ್ಟ. ಶಿರಾಳಕೊಪ್ಪದ ಜಾಕಿರ್ ಹುಸೇನ್ ರಸ್ತೆ, ಸಾಗರದ ಇಂಡಸ್ಟ್ರಿಯಲ್ ಏರಿಯಾ, ಆನಂದಪುರದ ಎಡೆಹಳ್ಳಿ ವೃತ್ತ, ಕಾರ್ಗಲ್‌ನ ಬಳಿಗಾರು. ತೀರ್ಥಹಳ್ಳಿಯ ಸೀಬಿನ ಕೆರೆ ವೃತ್ತ, ಹೊಸನಗರದ ಮಾರಿಗುಡ್ಡ, ನಗರದ ಚಿಕ್ಕಪೇಟೆ, ಬೆಜ್ಜುವಳ್ಳಿ, ಕೆಂಚನಾಳದಲ್ಲಿ ಪೊಲೀಸರು ವಿಶೇಷ ಗಸ್ತು ನಡೆಸಿದರು.
ಇದನ್ನೂ ಓದಿ – ಶಿಕಾರಿಪುರದ ಯುವಕನಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 20 ಸಾವಿರ ದಂಡ, ಈತನ ಅಪರಾಧವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422