ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ದುಬಾರಿ ಬೆಲೆಯ ಕರಿ ಮರದ ನಾಟಾ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು ಲಕ್ಷಾಂತರ ರೂ. ಮೌಲ್ಯದ ನಾಟಾ ವಶಪಡಿಸಿಕೊಳ್ಳಲಾಗಿದೆ.
ಹೊಳೆಹೊನ್ನೂರು ರಸ್ತೆಯಲ್ಲಿ ಬೊಲೇರೋ ಪಿಕಪ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ನಾಟಾ ತರಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಂಕರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಬೊಲೇರೋ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಬೀಟೆ ನಾಟಾದ ಜೊತೆಗೆ ಕರಿ ಮರದ ನಾಟಾ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ.
ರಾಜ್ಯದಲ್ಲೆ ಮೊದಲು ಈ ನಾಟಾ ವಶಕ್ಕೆ
ರಾಜ್ಯದಲ್ಲೆ ಮೊದಲ ಬಾರಿ ಕರಿ ಮರದ ನಾಟಾ ವಶಕ್ಕೆ ಪಡೆಯಲಾಗಿದೆ ಎಂದು ಶಂಕರ ವಲಯದ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು. ಡಯಸ್ಪೋರಸ್ ಎಬಿನಂ ಎಂಬ ತಳಿಯ ಮರ ಷೆಡ್ಯೂಲ್ 1ರ ಅಡಿ ಅಪಾಯದ ಅಂಚಿನಲ್ಲಿದೆ. ಆದ್ದರಿಂದ ಈ ಮರದ ನಾಟಾ ಸಾಗಣೆ ಅಪರಾಧ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಿ, ಕರಿ ಮರದ ನಾಟ ವಶಪಡಿಸಿಕೊಳ್ಳಲಾಗಿದೆ.
ಟೊಮ್ಯಾಟೋ ಟ್ರೇಗಳ ಅಡಿ ನಾಟಾ
ಬೊಲೇರೋ ಪಿಕಪ್‌ನಲ್ಲಿ ಟೊಮ್ಯಾಟೋ ಸಾಗಣೆಗೆ ಟ್ರೇಗಳಿದ್ದವು. ಅದರ ಕೆಳಗೆ ಟಾರ್ಪಲ್ ಸುತ್ತಿ ಬೀಟೆ ಮತ್ತು ಕರಿ ಮರದ ನಾಟಾ ಇರಿಸಲಾಗಿತ್ತು. ಒಟ್ಟು 32 ನಾಟಾ ವಶಕ್ಕೆ ಪಡೆಯಲಾಗಿದೆ. ಆರೋಪಿ ನಾಟಾವನ್ನು ಎಲ್ಲಿಗೆ ಸಾಗಿಸುತ್ತಿದ್ದ ಎಂಬುದರ ವಿಚಾರಣೆ ನಡೆಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು. ಇದರ ವಿಡಿಯೋ ಇಲ್ಲಿದೆ.
View this post on Instagram