ಹುಣಸೋಡು ಸ್ಪೋಟದ ತನಿಖೆಗೆ ಜಿಲ್ಲಾ ಮಂತ್ರಿಯೇ ಅಡ್ಡಿ, ಗಂಭೀರ ಆರೋಪ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021

ಹುಣಸೋಡು ಸ್ಪೋಟ ಪ್ರಕರಣದ ತನಿಖೆಗೆ ಜಿಲ್ಲಾ ಮಂತ್ರಿ ಅಡ್ಡಿಪಡಿಸುತ್ತಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾಗುತ್ತಿಲ್ಲ. ಕೂಡಲೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಈ ಜಿಲ್ಲಾ ಮಂತ್ರಿ ಇರುವ ತನಕ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಅಷ್ಟೊಂದು ಸ್ಪೋಟಕದ ತರಿಸಿದ್ಯಾರು?

ಹುಣಸೋಡು ಪ್ರಕರಣದಲ್ಲಿ ನಾಲ್ಕು ವಾಹನಗಳು ಸ್ಪೋಟಗೊಂಡಿವೆ. ಅಷ್ಟೊಂದು ಪ್ರಮಾಣದ ಸ್ಪೋಟಕವನ್ನು ಯಾರೆಲ್ಲ ತರಿಸಿದ್ದರು. ಒಂದೆ ಕ್ವಾರಿಗೆ ಅಷ್ಟೊಂದು ಸ್ಪೋಟಕ ಬಂದಿತ್ತಾ. ಸ್ಪೋಟಕಗಳಿಗಾಗಿ ಯಾರೆಲ್ಲ ಹಣ ಹೂಡಿಕೆ ಮಾಡಿದ್ದರು ಎಂಬುದು ಈ ತನಕ ತನಿಖೆಯಾಗಿಲ್ಲ ಎಂದರು.

160137555 1349567028738047 7953632359175748032 n.jpg? nc cat=111&ccb=1 3& nc sid=8bfeb9& nc ohc=Pzdo8E dA 8AX8uUuw7& nc ht=scontent.fblr4 2

ನರಸಿಂಹ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇಡೀ ಪ್ರಕರಣಕ್ಕೆ ಇವರಷ್ಟೆ ಕಾರಣವಾ. ಇದರ ಹಿಂದೆ ಬೇರೆ ಯಾರೂ ಇಲ್ಲವಾ ಎಂದು ಪ್ರಸನ್ನ ಕುಮಾರ್ ಪ್ರಶ್ನಿಸಿದರು. ಅಲ್ಲದೆ ಘಟನೆ ಸಂಬಂಧ ಯಾರನ್ನೇ ವಿಚಾರಣೆಗೆ ಕರೆದೊಯ್ದರೂ ಅರ್ಧ ಗಂಟೆಗೆ ಹಿಂತಿರುಗುತ್ತಿದ್ದಾರೆ. ಇತ್ತೀಚೆಗಷ್ಟೆ ಕಿಂಗ್ ಪಿನ್ ಒಬ್ಬಾತನನ್ನು ವಿಚಾರಣೆಗೆ ಕರೆತರಲಾಗಿತ್ತು. ಆದರೆ ಕೆಲವೇ ಹೊತ್ತಲ್ಲಿ ಆತನ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಮಂತ್ರಿ ಫೋನ್ ಮಾಡಿ ಎಲ್ಲರನ್ನು ಬಿಡಿಸುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಜನರು ತಲೆ ತಗ್ಗಿಸುವಂತಾಗಿದೆ

ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಸಿಕ್ಕಿದ್ದರಿಂದ ಇಡೀ ಜಿಲ್ಲೆಯ ಜನರು ತಲೆ ತಗ್ಗಿಸುವಂತಾಗಿತ್ತು. ಈಗ ಇನ್ನೂ ಯಾವೆಲ್ಲ ವಿಚಾರಕ್ಕೆ ತಲೆ ತಗ್ಗಿಸಬೇಕಾಗುತ್ತದೋ ಎಂದು ಪ್ರಸನ್ನ ಕುಮಾರ್ ಪ್ರಶ್ನಿಸಿದರು.

ಪಾಲಿಕೆ ಕಾರ್ಪೊರೇಟರ್‍ಗಳಾದ ರಮೇಶ್ ಹಗ್ಡೆ, ಆರ್.ಸಿ.ನಾಯ್ಕ್, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪ್ರಮುಖರಾದ ರಂಗನಾಥ್, ರಂಗೇಗೌಡ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment