ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜಿಲ್ಲೆಯಲ್ಲಿ 2,138 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ಮತ್ತು 139 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜನವರಿ ತಿಂಗಳಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ಕಾಮಗಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ಶಂಕುಸ್ಥಾಪನೆಗೆ ಸಿದ್ದವಾಗಿರುವ ಕಾಮಗಾರಿಗಳು
ಕಾಮಗಾರಿ 1 : ರಾಷ್ಟ್ರೀಯ ಹೆದ್ದಾರಿ 766ಸಿ ದ್ವಿಪಥದ ರಸ್ತೆ ಕಾಮಗಾರಿ 313.56 ಕೋಟಿ ರೂ. ವೆಚ್ಚ.
ಕಾಮಗಾರಿ 2 : ಶಿವಮೊಗ್ಗದ ತ್ಯಾವರೆಕೊಪ್ಪ ಲಯನ್ ಸಫಾರಿಯಿಂದ ತಾಳಗುಪ್ಪದವರೆಗೆ ನಾಲ್ಕು ಪಥದ ರಸ್ತೆ ಅಗಲೀಕರಣ ಕಾಮಗಾರಿ 653 ಕೋಟಿ ರೂ. ವೆಚ್ಚ.
ಕಾಮಗಾರಿ 3 : ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಾಲ್ಕು ಪಥದ ರಸ್ತೆ ಅಗಲೀಕರಣ ಕಾಮಗಾರಿ 39.5 ಕೋಟಿ ರೂ.
ಕಾಮಗಾರಿ 4 : ಸಾಗರದ ಹೊಸೂರು ಸಮೀಪ ರೈಲ್ವೆ ಮೇಲ್ಸೇತುವೆ ಕಾಮಗಾರಿ 198.58 ಕೋಟಿ ರೂ.
ಕಾಮಗಾರಿ 5 : ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು ರಾಣೆಬೆನ್ನೂರು ಸೆಕ್ಷನ್ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ 394.95 ಕೋಟಿ ರೂ.
ಕಾಮಗಾರಿ 6 : ತೀರ್ಥಹಳ್ಳಿಯ ನೆಲ್ಲಿಸರ ಕ್ಯಾಂಪ್ನಿಂದ ತೀರ್ಥಹಳ್ಳಿವರೆಗೆ ನಾಲ್ಕು ಪಥದ ರಸ್ತೆಯಾಗಿ ಅಗಲೀಕರಣ ಕಾಮಗಾರಿಗೆ 538.71 ಕೋಟಿ ರೂ.
ಕಾಮಗಾರಿ 7 : ಹೊಳೆಹೊನ್ನೂರು ಸಮೀಪ ಸೇತುವೆ ಪುನಶ್ಚೇತನ ಕಾಮಗಾರಿಗೆ 4.60 ಕೋಟಿ ರೂ.
ಕಾಮಗಾರಿ 8 : ಶಿವಮೊಗ್ಗದಲ್ಲಿರುವ ತುಂಗಾ ನದಿ ಸೇತುವೆ ಪುನಶ್ಚೇತನಕ್ಕೆ 3.99 ಕೋಟಿ ರೂ.
ಉದ್ಘಾಟನೆಗೆ ಸಿದ್ದವಾಗಿರುವ ಕಾಮಗಾರಿಗಳು
ಕಾಮಗಾರಿ 1 : ರಾಷ್ಟ್ರೀಯ ಹೆದ್ದಾರಿ 766ಸಿ ಬೈಂದೂರು ರಾಣೆಬೆನ್ನೂರು ಸೆಕ್ಷನ್ನಲ್ಲಿ 19.77 ಕೋಟಿ ರೂ.ವೆಚ್ಚದ ಸೇತುವೆಗಳ ಉದ್ಘಾಟನೆ.
ಕಾಮಗಾರಿ 2 : ಶಿವಮೊಗ್ಗ – ಮಂಗಳೂರು ಸೆಕ್ಷನ್ನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ 55.62 ಕೋಟಿ ರೂ.ವೆಚ್ಚದ ಸೇತುವೆಗಳು ಉದ್ಘಾಟನೆ.
ಕಾಮಗಾರಿ 3 : ವಿದ್ಯಾನಗರದಲ್ಲಿ 43.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆ.
ಕಾಮಗಾರಿ 4 : ತುಂಗಾ ನದಿಗೆ ಅಡ್ಡಲಾಗಿ 20.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟನೆ.
ಇದನ್ನೂ ಓದಿ – ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಹೊಸ ಸೇತುವೆ ಉದ್ಘಾಟನೆ, ವಾಹನ ಸಂಚಾರ ಶುರು, ಹೇಗಿದೆ ಸೇತುವೆ?