ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 14 NOVEMBER 2023
SHIMOGA : ದರೋಡೆಗೆ ಹೊಂಚು ಹಾಕಿದ್ದವರನ್ನು ಬಂಧಿಸಿರುವ ದೊಡ್ಡಪೇಟೆ ಪೊಲೀಸರು, ಸ್ಟೀಲ್ ಡ್ರ್ಯಾಗರ್, ಕಬ್ಬಿಣದ ರಾಡು ಹಾಗೂ ಲಾಂಗ್ ಅನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಒಬ್ಬ ಪರಾರಿಯಾಗಿದ್ದಾನೆ.
ಕೋಟೆಗಂಗೂರಿನ ಸಾಗರ್ ಅಲಿಯಾಸ್ ಶಬರೀಶ್ (22), ರಾಗಿಗುಡ್ಡದ ಶೇಯಸ್ (22), ಭದ್ರಾವತಿ ತಾಲೂಕಿನ ಬಾಬಳ್ಳಿಯ ದೇವರಾಜ್ (31), ಭದ್ರಾವತಿ ಎಪಿಎಂಸಿಯ ಅಡಕೆ ಮಂಡಿ ಕೆಲಸಗಾರ ನಾಗರಾಜ್ ಅಲಿಯಾಸ್ ಕುಮಾರ್ (38) ಬಂಧಿತರು. ಕೋಟೆಗಂಗೂರಿನ ಸಂತೋಷ್ ಪರಾರಿಯಾಗಿದ್ದಾನೆ.
ನಗರದ ಎನ್ಟಿ ರಸ್ತೆಯ ಫಲಕ್ ಶಾದಿ ಮಹಲ್ ಪಕ್ಕದ ಖಾಲಿ ಜಾಗಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಈ ಗ್ಯಾಂಗ್ ದರೋಡೆಗೆ ಹೊಂಚು ಹಾಕಿತ್ತು. ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ಅವರ ಬಳಿ ಇರುವ ನಗದು, ಚಿನ್ನಾಭರಣ ಕಿತ್ತುಕೊಳ್ಳಲು ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವಸಂತ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಬ್ಬಿಣದ ರಾಡು, ಮಚ್ಚು, 50 ಗ್ರಾಂ ತೂಕದ ಖಾರದ ಪುಡಿ, ಸ್ಟೀಲ್ ಡ್ಯಾಗರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ – ಗಾಜನೂರಿನಲ್ಲಿ ಕಿಂಗ್ ಫಿಶರ್ ಬಿಯರ್ಗಾಗಿ ಮದ್ಯದಂಗಡಿ ಬಾಗಿಲು ಮುರಿದ ಕಳ್ಳರು
LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















