SHIVAMOGGA LIVE NEWS | 25 FEBRURARY 2023
SHIMOGA : ಅಡಕೆ ಬೆಳೆಯಲು ಆಸಕ್ತಿ ಇರುವವರಿಗೆ ಸರ್ಕಾರ 4 ಎಕರೆ ಜಮೀನು ಮಂಜೂರು ಮಾಡಲಿದೆ. ಇದಕ್ಕಾಗಿ ತಲಾ 4 ಲಕ್ಷ ರೂ. ನೀಡಬೇಕು ಎಂದು 27 ಜನರಿಗೆ ವಂಚಿಸಲಾಗಿದೆ (fraud) ಎಂದು ಆರೋಪಿಸಿ ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದ ಸಂಜೀವ್ ಪ್ರಭು ಎಂಬುವವರು ಸೇರಿದ ಒಟ್ಟು 27 ಮಂದಿಗೆ ವಂಚಿಸಲಾಗಿದೆ. ಜಮೀನು ಕೊಡಿಸುವ ಆಸೆ ಹುಟ್ಟಿಸಿ ಪ್ರತಿಯೊಬ್ಬರಿಂದ ತಲಾ 4 ಲಕ್ಷ ರೂ. ಹಣ ಪಡೆಯಲಾಗಿದೆ. ಒಟ್ಟು 1.08 ಕೋಟಿ ರೂ. ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಂಚನೆ ಆಗಿದ್ದು ಹೇಗೆ?
ಸಂಜೀವ್ ಪ್ರಭು ಅವರು ನಡೆಸುತ್ತಿರುವ ಸಿಹಿ ತಿನಿಸು ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನನ್ನು ಸಮಾಜ ಸೇವಕ ಎಂದು ಪರಿಚಯಿಸಿಕೊಂಡಿದ್ದ. ಒಮ್ಮೆ ಮಾತನಾಡುವಾಗ ಸಮಾಜ ಸೇವಕ, ‘ಸರ್ಕಾರ ಅಡಕೆ ಬೆಳೆಯಲು 4 ಎಕರೆ ಜಮೀನು ಮಂಜೂರು ಮಾಡುತ್ತಿದೆ. ಕೃಷಿ ಆಸಕ್ತಿ ಇರುವ ಸಣ್ಣದೊಂದು ಗುಂಪು ಮಾಡಿಕೊಂಡು ಈ ಯೋಜನೆಯ ಲಾಭ ಪಡೆಯಬಹುದು’ ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – SHIMOGA AIRPORT JOBS ಹೆಸರಲ್ಲಿ ಆನ್ಲೈನ್ನಲ್ಲೆ ಸಂದರ್ಶನ, ಅಲ್ಲೇ ಹಣಕ್ಕೆ ಬೇಡಿಕೆ, ಅಕಾಂಕ್ಷಿಗಳೆ ಹುಷಾರ್
ತಲಾ 4 ಲಕ್ಷ ರೂ. ಹಣ
2014ರ ಸೆಪ್ಟೆಂಬರ್ ತಿಂಗಳಲ್ಲಿ ಸಂಜೀವ್ ಪ್ರಭು ಅವರ ಸಿಹಿ ತಿನಿಸು ಅಂಗಡಿಯಲ್ಲಿ 26 ಜನರು ಗಂಪು ಸೇರಿಸಿ, ಸಭೆ ನಡೆಸಲಾಯಿತು. ಅಲ್ಲಿ ಸಮಾಜ ಸೇವಕ ಸರ್ಕಾರದ ಯೋಜನೆ ಕುರಿತು ಮಾಹಿತಿ ನೀಡಿದ್ದ. ತಲಾ 4 ಎಕರೆ ಜಮೀನು ಮಂಜೂರು ಮಾಡಿಸಲು ಬೆಂಗಳೂರಿಗೆ ಓಡಾಟ, ಕಚೇರಿ ಖರ್ಚು ಎಂದು ಪ್ರತಿಯೊಬ್ಬರಿಂದ 4 ಲಕ್ಷ ರೂ. ಹಣ ಪಡೆದಿದ್ದ.
ಜಮೀನು ಮಂಜೂರು ಮಾಡಿಸುತ್ತೇನೆ ಎಂದು ಒಟ್ಟು 1.08 ಕೋಟಿ ರೂ. ಪಡೆದ ಸಮಾಜ ಸೇವಕ, ಈತನಕ ಜಮೀನು ಇಲ್ಲದೆ, ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾನೆ (fraud) ಎಂದು ಸಂಜೀವ್ ಪ್ರಭು ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.