ಕ್ರಿಕೆಟ್ ಬೆಟ್ಟಿಂಗ್, ಲಕ್ಷ ಲಕ್ಷ ರೂ. ಮೋಸ, ಶಿವಮೊಗ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 18 APRIL 2023

SHIMOGA : ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ (Cricket Betting) ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಿಕೊಡುತ್ತೇನೆ ಎಂದು ನಂಬಿಸಿ ಸ್ನೇಹಿತನೆ ಮೂರು ಲಕ್ಷ ರೂ. ವಂಚನೆ (Fraud) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

Crime-News-General-Image

ಏನಿದು ವಂಚನೆ ಕೇಸ್‍?

ಕ್ರಿಕೆಟ್‍ ಬೆಟ್ಟಿಂಗ್ ಜೂಜಾಟದಿಂದ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ಕಾರ್ತಿಕ್ ಎಂಬಾತನಿಂದ ಆತನ ಸ್ನೇಹಿತ ಹಣ ಹೂಡಿಕೆ ಮಾಡಿಸಿದ್ದ. ಕಳೆದ ಮೂರ್ನಾಲ್ಕು ವರ್ಷದಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಬಳಿಕ ಕಾರ್ತಿಕ್ ಕೇಳಿದಾಗಲೆಲ್ಲ ಬೆಟ್ಟಿಂಗ್‍ನಲ್ಲಿ ಹಣ ಹೋಯಿತು ಎಂದು ಹೇಳುತ್ತಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ‘ಲೈಕ್ ಮಾಡಿ, 50 ರೂ. ಸಂಪಾದಿಸಿ’, ನಂಬಿದ ಶಿವಮೊಗ್ಗದ ಯುವಕನ ಪರಿಸ್ಥಿತಿ ಈಗೇನಾಗಿದೆ ಗೊತ್ತಾ?

ಸುಮಾರು 3 ಲಕ್ಷ ರೂ. ಪಡೆದಿದ್ದು ಅದನ್ನು ಹಿಂತಿರುಗಿಸಿಲ್ಲ (Fraud) ಎಂದು ಆರೋಪಿಸಿ ಕಾರ್ತಿಕ್, ಸತೀಶ್ ಎಂಬಾತನ ವಿರುದ್ಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Comment