ಶಿವಮೊಗ್ಗದಲ್ಲಿ ಮೂರು ದಿನ ಕಣ್ಣಿನ ಉಚಿತ ತಪಾಸಣೆ, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?

 ಶಿವಮೊಗ್ಗ  LIVE 

ಶಿವಮೊಗ್ಗ: ಕುವೆಂಪು ರಸ್ತೆಯಲ್ಲಿರುವ ವಾಸನ್‌ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಸಮಗ್ರ ತಪಾಶಣಾ ಶಿಬಿರ (Eye Checkup) ಆಯೋಜಿಸಲಾಗಿದೆ. ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ ಎಂದು ಆಸ್ಪತ್ರೆಯ ನೇತ್ರ ತಜ್ಞರು ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಸನ್‌ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಪ್ರಸನ್ನ ಕುಮಾರ್‌, ಡಿಸೆಂಬರ್‌ 17, 18 ಮತ್ತು 19ರಂದು ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆ ಸಮೀಪದಲ್ಲಿ ಇರುವ ವಾಸನ್‌ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಿಬಿರ ಆಯೋಜಿಸಲಾಗಿದೆ. ರೆಟಿನಾ, ಗ್ಲಾಕೊಮಾ ತಪಾಸಣೆ ನಡೆಯಲಿದೆ ಎಂದರು.

ಡಾ. ಗುಣಶ್ರೀ ಮಾತನಾಡಿ, ಮಧುಮೇಹ ಇರುವವರಿಗೆ ದೃಷ್ಟಿ ಸಮಸ್ಯೆ ಇಲ್ಲದಿದ್ದರೂ ಕಣ್ಣಿನ ನರಗಳಲ್ಲಿ ಸಮಸ್ಯೆ ಇರುವ ಸಾಧ್ಯತೆ ಇರುತ್ತವೆ. ​ಆದ್ದರಿಂದ, ಮಧುಮೇಹ ಇರುವವರೆಲ್ಲ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಕಣ್ಣಿನ ನರಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಶಿಬಿರದಲ್ಲಿ ಎಲ್ಲಾ ತಪಾಸಣೆ ಉಚಿತವಾಗಿ ನಡೆಯುತ್ತವೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಬೇಕು ಎಂದರು.

Eye-testing-at-Vasan-Eye-Care-Hospital-in-Shimoga.

ಮಕ್ಕಳ ಕಣ್ಣಿನ ಬಗ್ಗೆ ಇರಲಿ ಜಾಗೃತಿ

ನೇತ್ರತಜ್ಞೆ ಡಾ.ರಶ್ಮೀ ಮಾತನಾಡಿ, ಇತ್ತೀಚಿಗೆ ಮಕ್ಕಳಲ್ಲಿ ದೃಷ್ಟಿ ದೋಷ ಸಾಮಾನ್ಯವಾಗಿದೆ. ಮೊಬೈಲ್ ಫೋನ್ ಮತ್ತು ಇತರೆ ಗ್ಯಾಜೆಟ್‌ಗಳ ಅತಿಯಾದ ಬಳಕೆಯೇ ಇದಕ್ಕೆ ಕಾರಣ. ಶಾಲೆಗಳಲ್ಲಿ ಪ್ರತೀ 50 ಮಕ್ಕಳ ಪೈಕಿ ಸುಮಾರು 30 ಮಕ್ಕಳು ಕನ್ನಡಕ ಧರಿಸುತ್ತಿದ್ದಾರೆ. ಓದಲು, ಆನ್‌ಲೈನ್‌ನಲ್ಲಿ ವಿಡಿಯೋ ವೀಕ್ಷಿಸಲು, ಮಕ್ಕಳು ಮೊಬೈಲ್‌ ಮತ್ತು ಟ್ಯಾಬ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಕಣ್ಣುಗಳ ಮೇಲೆ ಒತ್ತಡ ಬೀಳುತ್ತಿದೆ ಎಂದರು.  

ಇದನ್ನೂ ಓದಿ » ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು

ಮಕ್ಕಳು ಹತ್ತಿರ ಕುಳಿತು ಟಿವಿ ನೋಡುವುದು ಅಥವಾ ಕಣ್ಣುಗಳನ್ನು ಚಿಕ್ಕದು ಮಾಡಿ ನೋಡುವಂತಹ ಲಕ್ಷಣಗಳು ಕಂಡುಬಂದರೆ, ಪೋಷಕರು ಕೂಡಲೇ ಕಣ್ಣಿನ ಪರೀಕ್ಷೆ ಮಾಡಿಸಬೇಕು. ತಲೆನೋವಿನ ಸಮಸ್ಯೆ ಇರುವ ಮಕ್ಕಳಿಗೂ ಕಣ್ಣಿನ ಪರೀಕ್ಷೆ ಅಗತ್ಯ. ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡಿದರೆ ಮಕ್ಕಳ ದೃಷ್ಟಿ ಕಾಪಾಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗದ ಬಸವನಗುಡಿ, ವಿದ್ಯಾನಗರದಲ್ಲಿ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ

18 ರಿಂದ 40 ವರ್ಷದೊಳಗಿನವರಿಗೆ ಲೇಸರ್ ಚಿಕಿತ್ಸೆ ಲಭ್ಯವಿದೆ. ಕನ್ನಡಕ ಧರಿಸಲು ಇಷ್ಟಪಡದವರಿಗೆ ಅಥವಾ ಹೆಚ್ಚಿನ ಪವರ್ ಹೊಂದಿರುವವರಿಗೆ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನಮ್ಮಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ದೃಷ್ಟಿದೋಷ ಇರುವವರಿಗೆ ಕನ್ನಡಕ ಕೇವಲ ಅವಲಂಬನೆಯಲ್ಲ. ಕಣ್ಣಿನ ದೃಷ್ಟಿ ಬೆಳವಣಿಗೆಗೆ ಇದು ಸಹಕಾರಿ ಎಂದರು.

ಶಿವಮೊಗ್ಗ ಬ್ರಾಂಚ್‌ನ ಮ್ಯಾನೇಜರ್‌ ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment