ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ: ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ಎಲ್ಲ ಪಿಂಚಣಿದಾರರಿಗೆ ನ.7ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಉಚಿತವಾಗಿ ಜೀವನ ಪ್ರಮಾಣ ಪತ್ರ (Life Certificate) ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಚೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಒಕ್ಕೂಟ ಸಂಚಾಲಕ ವಿ.ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಅಂಚೆ ಇಲಾಖೆ ಅಧೀಕ್ಷಕ ಎಂ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಹೆಚ್.ಕೆ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಲ್ಲ ಸರ್ಕಾರಿ ಪಿಂಚಣಿದಾರರು ನ.1ರಿಂದ 30ರ ಒಳಗೆ ತಮ್ಮ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕು. ಆಗ ಪಿಂಚಣಿ ಮುಂದುವರಿಯುತ್ತದೆ.
ಜೀವನ ಪ್ರಮಾಣ ಪತ್ರ ಸಲ್ಲಿಸಲು ಬರುವಾಗ ಸರ್ಕಾರಿ ಪಿಂಚಣಿದಾರರು ತಮ್ಮ ಆಧಾರ್ ಕಾರ್ಡ್ ನಂಬರ್, ಪಿಪಿಒ ಸಂಖ್ಯೆ, ಎಸ್‌ಬಿ ಅಕೌಂಟ್ ಪಾಸ್‌ಬುಕ್ (ಪೆನ್ನನ್) ಸಂಖ್ಯೆ, ಒಟಿಪಿಗಾಗಿ ಮೊಬೈಲ್ ಫೋನ್ ತರಬೇಕು.
80 ವರ್ಷ ಮೀರಿದ, ಅಶಕ್ತ, ಅನಾರೋಗ್ಯಪೀಡಿತ ಪಿಂಚಣಿದಾರರು ಮುಂಚಿತವಾಗಿ ತಿಳಿಸಿದರೆ ಅವರ ಮನೆಯಲ್ಲಿಯೆ ಉಚಿತವಾಗಿ ಜೀವನ ಪ್ರಮಾಣ ಪತ್ರ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ವಿ. ಶಶಿಧರ (ಮೊಬೈಲ್ ನಂಬರ್ 9448839884) ಅವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ » ‘ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಾಸಾದ ವಿದ್ಯಾರ್ಥಿಗಳು ಫೇಲ್ʼ, NSUI ಗರಂ
Life Certificate





