SHIVAMOGGA LIVE | 12 JUNE 2023
SHIMOGA : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Ride) ಅವಕಾಶವಿದ್ದರೂ, ಜಿಲ್ಲೆಯ ಮಹಿಳೆಯರಿಗೆ ಇದರಿಂದ ಲಾಭವಿಲ್ಲ. ಶಿವಮೊಗ್ಗ – ಭದ್ರಾವತಿ ಮಾರ್ಗ ಹೊರತು ಉಳಿದೆಲ್ಲ ಮಾರ್ಗದಲ್ಲಿಯು ಖಾಸಗಿ ಬಸ್‌ಗಳ ಸಂಚಾರವೆ ಹೆಚ್ಚು. ದೂರ ಪ್ರಯಾಣ ಹೊರತು ಜಿಲ್ಲೆಯಲ್ಲಿ ಓಡಾಡುವ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಯಾವುದೆ ಅನುಕೂಲ ಆಗುವುದಿಲ್ಲ.
ಶಿವಮೊಗ್ಗ – ಭದ್ರಾವತಿ ರೂಟ್‌ನಲ್ಲಿ ರಷ್
ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚರಿಸುತ್ತವೆ. ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳು ಈ ಬಸ್ಸುಗಳ ಮೇಲೆ ಅವಲಂಬಿತವಾಗಿದ್ದರು. ಉಚಿತ ಪ್ರಯಾಣ ಜಾರಿಯಾದ ಹಿನ್ನೆಲೆ ಈ ಮಾರ್ಗದ ಬಸ್ಸುಗಳಲ್ಲಿ ಸೀಟ್ ಸಿಗುವುದೆ ಕಷ್ಟವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ – ಭದ್ರಾವತಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರು ಕೂಡ ಇವತ್ತು ಡೋರ್‌ನಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದದ್ದು ಕಂಡು ಬಂತು. ಇನ್ನು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದ ಸರ್ಕಾರಿ ಬಸ್ ಹತ್ತುತ್ತಿದ್ದರಿಂದ ನಿಲ್ದಾಣದಲ್ಲಿಯೇ ಬಸ್ ಫುಲ್ ಆಗುತ್ತಿತ್ತು. ಹಾಗಾಗಿ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸರ್ಕಾರಿ ಬಸ್ ಹತ್ತಲು ಹಿಂದೇಟು ಹಾಕುವಂತಾಗಿದೆ.
ಇದನ್ನೂ ಓದಿ – ಮಹಿಳೆಯರಿಗೆ ಫ್ರೀ ಪ್ರಯಾಣ, ಶಿವಮೊಗ್ಗ ನಿಲ್ದಾಣದಲ್ಲಿ ಹೇಗಿದೆ ಪರಿಸ್ಥಿತಿ? ಯಾವೆಲ್ಲ ರೂಟ್ ಬಸ್‌ಗೆ ಇತ್ತು ಡಿಮಾಂಡ್?
ಡಿಮಾಂಡ್ ಕಳೆದುಕೊಳ್ಳದ ಖಾಸಗಿ ಬಸ್
ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ (Free Ride) ಸಂಖ್ಯೆ ಅಧಿಕವಿತ್ತು. ಆದರೆ ಖಾಸಗಿ ಬಸ್‌ಗಳಿಗೆ ಇದರಿಂದ ಯಾವುದೆ ತೊಂದರೆ ಆಗಿರುವಂತೆ ಕಂಡು ಬರಲಿಲ್ಲ. ಶಿವಮೊಗ್ಗ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ 400 ರಿಂದ 500 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ವಿವಿಧ ಗ್ರಾಮಗಳಿಗೆ ಬಸ್‌ಗಳು ತೆರಳುತ್ತಿವೆ. ಈ ಮಾರ್ಗಗಳಲ್ಲಿ ಸರ್ಕಾರಿ ಬಸ್ಸುಗಳು ಇಲ್ಲ. ಹಾಗಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.
ಉಚಿತ ಪ್ರಯಾಣ ಯೋಜನೆ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ದೂರದ ಊರು, ಧಾರ್ಮಿಕ ಕ್ಷೇತ್ರಗಳಿಗೆ ತೆರಳು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದರು.