ಗೃಹಿಣಿಯ ಸಮಯ ಪ್ರಜ್ಞೆ, ಕೋಟೆ ರಸ್ತೆಯಲ್ಲಿ ತಪ್ಪಿತು ದೊಡ್ಡ ಅನಾಹುತ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2021

ಗೃಹಿಣಿಯೊಬ್ಬರ ಸಮಯಪ್ರಜ್ಞೆಯಿಂದ ಶಿವಮೊಗ್ಗ ಕೋಟೆ ರಸ್ತೆಯಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಇಲ್ಲಿನ ವೆಂಕಟಕೃಷ್ಣ ಜೋಯ್ಸ್‍ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‍ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಸಿಲಿಂಡರ್‍ನ ಮೆಲ್ಭಾಗದಲ್ಲಿ ಗ್ಯಾಸ್ ಹೊರ ಬರುವ ಕಡೆ ಬೆಂಕಿ ಜೋರಾಗಿದ ಹೊತ್ತುಕೊಂಡಿದೆ.

ಸಮಯ ಪ್ರಜ್ಞೆ ಮೆರೆದ ಗೃಹಿಣಿ

ಸಿಲಿಂಡರ್‍ನಲ್ಲಿ ಬೆಂಕಿ ಕಾಣಿಸಕೊಂಡರೂ ವಿಚಲಿತರಾಗದ ವೆಂಕಟಕೃಷ್ಣ ಜೋಯ್ಸ್ ಅವರ ಪತ್ನಿ ಶಕುಂತಲಮ್ಮ, ಸಿಲಿಂಡರನ್ನು ಅಡುಗೆ ಮನೆಯಿಂದ ಹೊರಗೆ ತಂದಿದ್ದಾರೆ. ಮನೆಯ ಹಿತ್ತಲಿನಲ್ಲಿ ಸಿಲಿಂಡರ್ ಇರಿಸಿ ಅಕ್ಕಪಕ್ಕದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ದೌಡು

ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಲಿಂಡರ್‍ಗೆ ಹೊತ್ತುಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿಶಾಮಕ ದಳದ ಡಿಎಫ್‍ಒ ಅಶೋಕ್‍ ಕುಮಾರ್, ಠಾಣಾಧಿಕಾರಿ ಪ್ರವೀಣ್‍ ಕುಮಾರ್‍ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜುಲೈ 14, 2021

Leave a Comment