ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2023
SHIMOGA : ಮೆಗ್ಗಾನ್ ಆಸ್ಪತ್ರೆಯ ಮಹಿಳಾ ವಾರ್ಡ್ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಚಿನ್ನದ ನಾಣ್ಯಗಳನ್ನು (gold coin) ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 10 ಲಕ್ಷ ರೂ. ವಂಚಿಸಿದ್ದಾಳೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮಹಿಳಾ ವಾರ್ಡ್ನಲ್ಲಿ ವಂಚಕಿ ಪರಿಚಯ
ಶಿವಮೊಗ್ಗದ ರಶ್ಮಿ ಎಂಬುವವರು ಗರ್ಭಕೋಶದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಲು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳಾ ವಾರ್ಡ್ನಲ್ಲಿ ರಶ್ಮಿ ಅವರ ಪಕ್ಕದ ಬೆಡ್ನಲ್ಲಿ ದಾಖಲಾಗಿದ್ದ ಗೀತಾ ಅಲಿಯಾಸ್ ಜಯಮ್ಮ ಎಂಬುವವರು ಪರಿಚಯವಾಗಿದ್ದರು. ಕಳೆದ ಮೂರು ತಿಂಗಳಿಂದ ರಶ್ಮಿ ಅವರ ಜೊತೆಗೆ ಗೀತಾ ಫೋನ್ ಮೂಲಕ ಮಾತನಾಡುತ್ತ ವಿಶ್ವಾಸ ಗಿಟ್ಟಿಸಿಕೊಂಡಿದ್ದಳು.
ಚಿನ್ನದ ನಾಣ್ಯಕ್ಕೆ 10 ಲಕ್ಷ ರೂ.
ಇದೇ ವೇಳೆ ತನ್ನ ಬಳಿ ಬಂಗಾರದ ನಾಣ್ಯಗಳಿವೆ ಎಂದು ಗೀತಾ ಹೇಳಿಕೊಂಡಿದ್ದರು. ಒಂದು ನಾಣ್ಯವನ್ನು ರಶ್ಮಿ ಅವರಿಗೆ ಕೊಟ್ಟಿದ್ದಳು. ಪರಿಶೀಲಿಸಿದಾಗ ಅಸಲಿ ಚಿನ್ನದ ನಾಣ್ಯ ಎಂಬುದು ಗೊತ್ತಾಗಿತ್ತು. ಹೆಚ್ಚಿನ ಪ್ರಮಾಣದ ಬಂಗಾರದ ನಾಣ್ಯಗಳಿವೆ, 10 ಲಕ್ಷ ರೂ. ಕೊಟ್ಟರೆ ಬಂಗಾರದ ಎಲ್ಲಾ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿದಳು.
ಇದನ್ನೂ ಓದಿ – ಮನೆಯಿಂದ ಕೆಲಸ ಮಾಡಿ, ಕೈ ತುಂಬಾ ಸಂಪಾದಿಸಿ, ಜಾಹೀರಾತು ನಂಬಿದ ಗೃಹಿಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯಾಕೆ?
ಗಾಮಾ ಗ್ರಾಮಕ್ಕೆ ಬರಲು ಹೇಳಿದಳು
ಚಿಕಿತ್ಸೆಗೆಂದು ಸಹೋದರ ಹೊಂದಿಸಿ ಇಟ್ಟಿದ್ದ 10 ಲಕ್ಷ ರೂ. ಹಣವನ್ನು ರಶ್ಮಿ ಚಿನ್ನದ ನಾಣ್ಯ (gold coin) ತರಲು ಕೊಂಡೊಯ್ದಿದ್ದರು. ಶಿಕಾರಿಪುರ ತಾಲೂಕು ಗಾಮಾ ಗ್ರಾಮಕ್ಕೆ ಬರುವಂತೆ ಗೀತಾ ತಿಳಿಸಿದ್ದಳು. ಕೊನೆ ಕ್ಷಣದಲ್ಲಿ ತಾನು ಬರಲು ಆಗುತ್ತಿಲ್ಲ. ತನ್ನ ಗಂಡ ಮಂಜುನಾಥ್ ಮತ್ತು ಸಂಬಂಧಿ ಬಂದು ಚಿನ್ನದ ನಾಣ್ಯಗಳನ್ನು ಕೊಡುತ್ತಾರೆ ಎಂದು ತಿಳಿಸಿದ್ದಳು. ಅಂತೆಯೇ ಇಬ್ಬರು ವ್ಯಕ್ತಿಗಳು ರಶ್ಮೀ ಅವರ ಬಳಿ ಬಂದು, 10 ಲಕ್ಷ ರೂ. ಹಣ ಪಡೆದು, ಗಂಟನ್ನು ಕೈಗೆ ಕೊಟ್ಟರು. ಅಲ್ಲದೆ ಸ್ಥಳದಲ್ಲಿ ಹೆಚ್ಚು ಹೊತ್ತು ನಿಲ್ಲುವಂತಿಲ್ಲ, ಬೇಗ ಹೊರಡಿ ಎಂದು ಎಚ್ಚರಿಸಿ ಹೋದರು.
ಇದನ್ನೂ ಓದಿ – ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯ? ಚೆಕ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮನೆಗೆ ಬಂದಾಗ ಕಾದಿತ್ತು ಶಾಕ್
ಮನೆಗೆ ಬಂದ ರಶ್ಮಿ ಅವರು ಗಂಟು ಬಿಚ್ಚಿದಾಗ ಚಿನ್ನ ಲೇಪಿತ ನಾಣ್ಯಗಳನ್ನು ನೀಡಿ ವಂಚಿಸಿರುವುದು ಗೊತ್ತಾಗಿದೆ. ಗೀತಾ ಅಲಿಯಾಸ್ ಜಯಮ್ಮಳ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿತ್ತು. ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ರಶ್ಮಿ ಅವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಒಂದೂವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದ ಬಾಣಂತಿ, ಕಾರಣವೇನು?