ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 13 AUGUST 2024 : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳು 7 ಪದಕ (Medal) ಪಡೆದಿದ್ದಾರೆ ಎಂದು ಟೇಕ್ವಾಂಡೋ (Taekwondo) ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಆರ್.ಮೀನಾಕ್ಷಿ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಟೇಕ್ವಾಂಡೋ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಎ.ಶಶಿವರ್ಧನ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 41ನೇ ರಾಜ್ಯಮಟ್ಟದ ಟೇಕ್ವಾಂಡೋ ಅಧಿಕೃತ ಚಾಂಪಿಯನ್ಶಿಪ್ನಲ್ಲಿ ಜಿಲ್ಲೆಯ 18 ಮಕ್ಕಳು ಭಾಗವಹಿಸಿದ್ದರು. ತಲಾ ಎರಡು ಚಿನ್ನ ಮತ್ತು ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ ⇒ ಪುರದಾಳು ರಸ್ತೆಯಲ್ಲಿ ಅಪಘಾತ, ಮಹಿಳೆಯ ಎರಡು ಕಾಲಿನ ಮೂಳೆ ಕಟ್ – ಇಲ್ಲಿದೆ 3 ಫಟಾಫಟ್ ನ್ಯೂಸ್
ಜಿ-4 ವಿಭಾಗದಲ್ಲಿ ಭುವನ್ಕುಮಾರ್, ಯಶನ್ ಕುಮಾರ್ ಪ್ರಥಮ, ಭೂಮಿಕಾ ಮತ್ತು ಜಗದೀಶ್ ದ್ವಿತೀಯ, ಹಿತಾ, ಸಾತ್ವಿಕ್ ಹಾಗೂ ಜೂನಿಯರ್ ವಿಭಾಗದ 55 ಕೆ.ಜಿ ವಿಭಾಗದಲ್ಲಿ ಪಿ.ಎ.ಸ್ಫೂರ್ತಿ ತೃತೀಯ ಸ್ಥಾನ ಪಡೆದಿದ್ದಾರೆ. ಟೇಕ್ವಾಂಡೋ ಕ್ರೀಡೆ ಒಲಿಂಪಿಕ್ಸ್ ಕ್ರೀಡೆ ಹಾಗೂ ಸ್ವರಕ್ಷಣಾ ತರಬೇತಿ, ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ದಿನಗಳಲ್ಲಿ ಕ್ರೀಡಾ ಮೀಸಲಾತಿ ಹುದ್ದೆಗಳಿಗೆ ಪ್ರಯೋಜನವಾಗಲಿದೆ. ಶಿವಮೊಗ್ಗದ 3 ಶಾಖೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ದಸರಾ, ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ಸ್ ಹಾಗೂ ಅಧಿಕೃತ ರಾಜ್ಯ, ರಾಷ್ಟ್ರಮಟ್ಟದ ಟೇಕ್ವಾಂಡೋ ಚಾಂಪಿಯನ್ಶಿಪ್ಗಳಲ್ಲಿ ನೀಡಲಾಗುವುದು ಎಂದರು.
ನಿರ್ದೇಶಕಿ ಇಂಚನಾ, ಸಹ ಕಾರ್ಯದರ್ಶಿ ಸಿಂಚನಾ, ಕ್ರೀಡಾಪಟುಗಳಾದ ಸವಿತಾ, ಸ್ವಪ್ನಾ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ ⇒ ಸಾಲ ವಸೂಲಿಗೆ ಮಹಿಳೆಯರ ಮನೆಗೆ ಹೋಗಿ ಕೂರುವ ಸಿಬ್ಬಂದಿ, ಖಡಕ್ ಸೂಚನೆ ನೀಡುವಂತೆ ಏಕಾಂಗಿ ಹೋರಾಟ