ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿ ಬಳಿ ಕೋಟಿ ಕೋಟಿ ಮೊತ್ತದ ಬಂಗಾರ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 8 APRIL 2023

SHIMOGA : ಖಚಿತ ಮಾಹಿತಿ ಮೇರೆಗೆ ಗಾಂಧಿ ಬಜಾರ್‌ನ ಎಲೆ ರೇವಣ್ಣಕೇರಿಯಲ್ಲಿ ವ್ಯಕ್ತಿಯೊಬ್ಬನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನಾಭರಣವನ್ನು (Gold Ornaments) ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿಗೆ. ಆತನ ಆಂಗಡಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಒಟ್ಟು 9 ಕೆ.ಜಿ ಬಂಗಾರ ಪತ್ತೆಯಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

gold-found-in-Shimoga-Gandhi-Bazaar

ಕೋಟೆ ಠಾಣೆ ಇನ್ಸ್‌ಪೆಕ್ಟರ್‌ ಶಿವಪ್ರಸಾದ್‌ ಅವರು ಖಚಿತ ಮಾಹಿತಿ ಮೇರೆಗೆ ಗಾಂಧಿ ಬಜಾರ್‌ ಎಲೆ ರೇವಣ್ಣಕೇರಿಯಲ್ಲಿ  ಅನುಮಾನಾಸ್ಪದಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಆತನ ಬಳಿ ಚಿನ್ನಾಭರಣ (Gold Ornaments) ಪತ್ತೆಯಾಗಿದೆ. ಅಲ್ಲದೆ ಆತ ಅಕ್ರಮವಾಗಿ ಚಿನ್ನಾಭರಣ ಕೊಂಡೊಯ್ಯುತ್ತಿದ್ದ ಅಂಗಡಿಯನ್ನು ಶೋಧಿಸಿದಾಗ ಒಟ್ಟು 9.565 ಕೆ.ಜಿ ಪತ್ತೆಯಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೆದರಿಸದ್ದವನು ಅರೆಸ್ಟ್, ಆತನ ಬಳಿ ಏನೇನೆಲ್ಲ ಸಿಕ್ತು?

ವಶಕ್ಕೆ ಪಡೆಯದ ಚಿನ್ನಾಭರಣದ ಒಟ್ಟು ಮೌಲ್ಯ 5.83 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಚಿನ್ನಾಭರಣಕ್ಕೆ ಸೂಕ್ತ ದಾಖಲೆ ಒದಗಿಸಲು ವ್ಯಕ್ತಿ ವಿಫಲನಾಗಿದ್ದಾನೆ. ಆದ್ದರಿಂದ ಆಭರಣವನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Leave a Comment