ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಲಕ್ಷಾಂತರ ಮೌಲ್ಯದ ಗಟ್ಟಿ ಬಂಗಾರದ ಜೊತೆಗೆ ಕಣ್ಮರೆಯಾಗಿದ್ದಾನೆ. ಬಂಗಾರ ಪಾಲಿಶ್ ಮಾಡಿಸಿಕೊಂಡು ಬರುವುದಾಗಿ ತಿಳಿಸಿ ಹೋದವನು ಮತ್ತೆ ಹಿಂತಿರುಗಿಲ್ಲ ಎಂದು ಆರೋಪಿಸಿ ಮಾಲೀಕ ದೂರು ನೀಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಪ್ರಕರಣ?
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿರುವ ಜ್ಯುವೆಲ್ಲರಿ ಶಾಪ್‌ನಲ್ಲಿ ಘಟನೆ ನಡೆದಿದೆ. 130 ಗ್ರಾಂ 680 ಮಿಲಿ ತೂಗದ ಬಂಗಾರದ ಗಟ್ಟಿಯನ್ನು ಡಿ.28ರಂದು ತಮ್ಮ ಅಂಗಡಿಯ ಕೆಲಸಗಾರ ಅದಿತ್ತೋ ಮಾಜಿ ಎಂಬಾತನಿಗೆ ಮಾಲೀಕ ನೀಡಿದ್ದರು. ಕಸೂತಿ ಕೆಲಸ ಮಾಡಿ ಆಭರಣಗಳನ್ನು ತಯಾರಿಸುವಂತೆ ಸೂಚಿಸಿದ್ದರು.
ಅಂದ ಮಧ್ಯಾಹ್ನ ಮನೆಗೆ ಊಟಕ್ಕೆ ತೆರಳಿದ್ದ ಮಾಲೀಕ ಅಂಗಡಿಗೆ ಹಿಂತಿರುಗಿದಾಗ ಅದಿತ್ತೋ ಮಾಜಿ ಇರಲಿಲ್ಲ. ಉಳಿದ ಕೆಲಸಗಾರರನ್ನು ವಿಚಾರಿಸಿದಾಗ ಆಭರಣಗಳಿಗೆ ಪಾಲಿಶ್ ಮಾಡಿಸಲು ಹೋಗಿರುವುದಾಗಿ ತಿಳಿಸಿದ್ದರು. ಬಹು ಹೊತ್ತಾದರು ಆತ ಹಿಂತಿರುಗದಿದ್ದಾಗ ಅಂಗಡಿ ಮಾಲೀಕ ಕರೆ ಮಾಡಿದ್ದಾರೆ. ಅದಿತ್ತೋ ಮಾಜಿಯ ಮೊಬೈಲ್ ಸ್ವಿಚ್ ಆಫ್ ಎಂದು ಬಂದಿದೆ. ಅಂಗಡಿಯಲ್ಲಿ ಪರಿಶೀಲಿಸಿದಾಗ ಆಭರಣ ತಯಾರಿಸಲು ನೀಡಿದ್ದ ಚಿನ್ನದ ಗಟ್ಟಿ ಇರಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಅತಿಥಿ ಉಪನ್ಯಾಸಕನಿಂದ ಲೈಂಗಿಕ ಕಿರುಕುಳ ಆರೋಪ, ರಸ್ತೆಗಿಳಿದ ವಿದ್ಯಾರ್ಥಿಗಳು, ಬಂಧನಕ್ಕೆ ಬಿಗಿಪಟ್ಟು
ತಮ್ಮ ಅಂಗಡಿಯಲ್ಲಿ ಕೆಲಸಕ್ಕಿದ್ದ ಕಲ್ಕತ್ತಾ ಮೂಲದ ಅದಿತ್ತೋ ಮಾಜಿ ಎಂಬಾತ 8.47 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಚಿನ್ನದ ಅಂಗಡಿ ಮಾಲೀಕ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.