ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021
ಶಿವಮೊಗ್ಗ ಸಿಟಿಯಲ್ಲಿ ಗೋಸುಂಬೆ ಒಂದನ್ನು ರಕ್ಷಣೆ ಮಾಡಲಾಗಿದೆ. ಹಿರಿಯ ಛಾಯಗ್ರಾಹಕ ಶಿವಮೊಗ್ಗ ನಂದನ್ ಅವರು ಗೋಸುಂಬೆಯನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.
ಎಲ್ಲಿ ಕಾಣಿಸ್ತು ಗೋಸುಂಬೆ?
ಶಿವಮೊಗ್ಗದ ಅಚ್ಚುತರಾವ್ ಲೇಔಟ್ 3ನೇ ಅಡ್ಡರಸ್ತೆಯ ಮೋಹನ್ ಶಾಸ್ತ್ರಿ ಅವರ ಮನೆ ಬಳಿ ಗೋಸುಂಬೆ ಕಾಣಿಸಿಕೊಂಡಿದೆ. ಶಿವಮೊಗ್ಗ ನಂದನ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ನಂದನ್, ಗೋಸುಂಬೆಯನ್ನು ರಕ್ಷಿಸಿದ್ದಾರೆ. ಅಲ್ಲದೆ ಸ್ಥಳೀಯರಿಗೆ ಗೋಸುಂಬೆ ಕುರಿತು ಮಾಹಿತಿ ನೀಡಿದರು.
ಗೋಸುಂಬೆ ಇಲ್ಲಿಗೆ ಬಂದಿದ್ದು ಹೇಗೆ?
ಶಿವಮೊಗ್ಗ ಸಿಟಿಯ ಒಳಗೆ ಗೋಸುಂಬೆಗಳು ತುಂಬಾ ವಿರಳ. ಕುವೆಂಪು ರಸ್ತೆ ಪಕ್ಕದ ಅಚ್ಚುತರಾವ್ ಲೇಔಟ್‍ನಲ್ಲಿ ಗೋಸುಂಬೆ ಕಾಣಿಸಿಕೊಂಡಿರುವುದು ಅನುಮಾನ ಮೂಡಿಸಿದೆ. ಗೋಸುಂಬೆಯನ್ನು ಯಾರೋ ತಂದು ಬಿಟ್ಟಿರುವ ಶಂಕೆ ಇದೆ. ಸ್ಥಳೀಯರು ಕೂಡ ಇದೆ ಅನುಮಾನ ವ್ಯಕ್ತಪಡಿಸಿದ್ದಾರೆ. ವನ್ಯಜೀವ ಕಾಯ್ದೆ ಅಡಿ ಇದು ಶಿಕ್ಷಾರ್ಹ ಅಪರಾಧವಾಗಿದೆ.
ಗೋಸುಂಬೆ ರಕ್ಷಣೆಯ ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]