ಶಿವಮೊಗ್ಗದಲ್ಲಿ ಬೇಳೂರು ಗೋಪಾಲಕೃಷ್ಣಗೆ ಅದ್ಧೂರಿ ಸ್ವಾಗತ, ಪಟಾಕಿ ಸಿಡಿಸಿ, ಬೃಹತ್‌ ಹಾರ ಹಾಕಿ ಸಂಭ್ರಮ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS
SHIVAMOGGA LIVE NEWS | 3 FEBRUARY 2024
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

SHIMOGA : ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಶಿವಮೊಗ್ಗಕ್ಕೆ ಆಗಮಿಸಿದ ಬೇಳೂರು ಗೋಪಾಲಕೃಷ್ಣ ಅವರಿಗೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ಜಾಥಾ ನಡೆಸಿ ಸ್ವಾಗತಿಸಿದರು. ಬೆಕ್ಕಿನ ಕಲ್ಮಠದ ಬಳಿ ಬೇಳೂರು ಗೋಪಾಲಕೃಷ್ಣ ಅವರನ್ನು ಯುವ ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಗತಿಸಿದರು.

ನಗರದಲ್ಲಿ ಬೈಕ್‌ ಜಾಥಾ

ಬೇಳೂರು ಗೋಪಾಲಕೃಷ್ಣ ಅವರನ್ನು ಬೈಕ್‌ ಜಾಥಾ ಮೂಲಕ ಕಾಂಗ್ರೆಸ್‌ ಕಚೇರಿಗೆ ಕರೆತರಲಾಯಿತು. ಬೆಕ್ಕಿನಕಲ್ಮಠದಿಂದ ಬಿ.ಹೆಚ್‌.ರಸ್ತೆ ಮೂಲಕ ಶಿವಪ್ಪನಾಯಕ ಪ್ರತಿಮೆ, ಅಮೀರ್‌ ಅಹಮ್ಮದ್‌ ಸರ್ಕಲ್‌, ನೆಹರು ರಸ್ತೆ, ಗೋಪಿ ಸರ್ಕಲ್‌, ಬಾಲರಾಜ ಅರಸ್‌ ರಸ್ತೆ ಮೂಲಕ ಕಾಂಗ್ರೆಸ್‌ ಕಚೇರಿಗೆ ಕರೆತರಲಾಯಿತು. ಕಾಂಗ್ರೆಸ್‌ ಕಚೇರಿ ಬಳಿ ಬೇಳೂರು ಗೋಪಾಲಕೃಷ್ಣ ಅವರನ್ನು ಹೆಗಲ ಮೇಲೆ ಹೊತ್ತು ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಿಸಿದರು.

ಹಾರದಲ್ಲಿದ್ದ ಸೇಬಿಗೆ ಮುಗಿಬಿದ್ದ ಜನ

ಬೇಳೂರು ಗೋಪಾಲಕೃಷ್ಣ ಅವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸೇಬು ಹಣ್ಣಿನ ಬೃಹತ್‌ ಹಾರ ಹಾಕಿದರು. ಅದರಲ್ಲಿದ್ದ ಸೇಬು ಹಣ್ಣುಗಳನ್ನು ಕಿತ್ತುಕೊಳ್ಳಲು ನೂಕುನುಗ್ಗಲು ಉಂಟಾಯಿತು.

ಕಾಂಗ್ರೆಸ್‌ ಕಚೇರಿಯಲ್ಲಿ ಸನ್ಮಾನ

ಅರಣ್ಯ ಕೈಗರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರಿಗೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಇಂಧನ ಸಚಿವ ಕೆ.ಜೆ.ಜಾರ್ಜ್‌ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

ಇದನ್ನೂ ಓದಿ – ಶಿವಮೊಗ್ಗ, ಸಾಗರ ತಹಶೀಲ್ದಾರ್‌ಗಳ ವರ್ಗಾವಣೆ, ಯಾರು ಹೊಸ ತಹಶೀಲ್ದಾರ್‌?

Beluru Gopalakrishna

Beluru Gopalakrishna

Beluru Gopalakrishna

Beluru Gopalakrishna

Leave a Comment