ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 JANUARY 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಹೊಸ ವರ್ಷದ ಆರಂಭದಲ್ಲಿ ಜಿಮ್‌ಗಳ ಮೆಂಬರ್‌ಶಿಪ್‌ಗೆ ಡಿಮಾಂಡ್ ಹೆಚ್ಚಾಗಿದೆ. ನಗರದ ಬಹುತೇಕ ಜಿಮ್‌ಗಳಿಗೆ ಹೊಸ ವರ್ಷದಂದು ಹೊಸ ಅಡ್ಮಿಷನ್‌ಗಳಾಗಿವೆ. ಈ ವಾರದಲ್ಲಿ ಮತ್ತಷ್ಟು ಮಂದಿ ಜಿಮ್ ಸೇರುವ ಸಾಧ್ಯತೆ ಇದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಜಿಮ್, ಯೋಗ ಕ್ಲಾಸ್‌ನತ್ತ ಹೆಚ್ಚಿದ ಆಸಕ್ತಿ
ಬಹುತೇಕರು ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆರೋಗ್ಯ ಮತ್ತು ಫಿಟ್ನೆಸ್ ಕುರಿತು ನಿರ್ಣಯ ತೆಗೆದುಕೊಳ್ಳುವವರು ಜಿಮ್ ಮತ್ತು ಯೋಗ ಕ್ಲಾಸ್‌ಗಳತ್ತ ಮುಖ ಮಾಡುತ್ತಾರೆ. ಶಿವಮೊಗ್ಗ ನಗರದಲ್ಲಿ 25ಕ್ಕೂ ಹೆಚ್ಚು ಜಿಮ್‌ಗಳಿವೆ. ಇಂದಿನಿಂದ ಎಲ್ಲೆಡೆ ಹೊಸ ಅಡ್ಮಿಷನ್‌ಗಳು ಆರಂಭವಾಗಿವೆ. ಈ ಪ್ರಕ್ರಿಯೆ ಇನ್ನೂ ಒಂದು ವಾರ ಮುಂದುವರೆಯಲಿದೆಯಂತೆ.
ಯೋಗ ಕ್ಲಾಸ್‌ಗು ಡಿಮಾಂಡ್
ಇನ್ನು, ನಗರದಲ್ಲಿ ಯೋಗ ಕ್ಲಾಸ್‌ಗಳ ದಾಖಲಾತಿಗು ಡಿಮಾಂಡ್ ಹೆಚ್ಚಾಗಿದೆ. ವಿವಿಧೆಡೆ ತರಬೇತುದಾರರನ್ನು ಸಂಪರ್ಕಿಸಿ ಹಲವರು ಯೋಗ ಕ್ಲಾಸ್‌ಗಳಿಗೆ ದಾಖಲಾಗುತ್ತಿದ್ದಾರೆ. ಇಲ್ಲಿಯು ದಾಖಲಾತಿ ಸಂಖ್ಯೆ ಪ್ರತಿ ತಿಂಗಳಿಗಿಂತಲು ಹೆಚ್ಚಾಗಿದೆ.
ವರ್ಷಾರಂಭದಲ್ಲಿ ಹುಮ್ಮಸ್ಸಿನಿಂದ ಜಿಮ್, ಯೋಗ ಕೇಂದ್ರಗಳಿಗೆ ದಾಖಲಾಗುತ್ತಾರೆ. ಈ ಪೈಕಿ ಹಲವರು ವಿವಿಧ ಕಾರಣಕ್ಕೆ ಆರಂಭದಲ್ಲೇ ಜಿಮ್, ಯೋಗ ಕೇಂದ್ರಗಳಿಗೆ ಗುಡ್ ಬೈ ಹೇಳುತ್ತಾರೆ. ಬೆರಳೆಣಿಕೆ ಮಂದಿ ತರಬೇತಿ ಮುಂದುವರೆಸಿ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ.
ಇದನ್ನೂ ಓದಿ – ಶಿವಮೊಗ್ಗದ ಸ್ಮಾರ್ಟ್ ಸಿಟಿ ಗಡಿಯಾರದಲ್ಲಿ ದಿಕ್ಕಿಗೊಂದು ಟೈಮ್