SHIVAMOGGA LIVE NEWS | 15 DECEMBER 2022
ಶಿವಮೊಗ್ಗ : 2017ರಲ್ಲಿ ಶಿವಮೊಗ್ಗದಲ್ಲಿ ಬಿಡುಗಡೆಯಾದ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ‘ಹಾಫ್ ಪ್ಯಾಂಟ್ಸ್, ಫುಲ್ ಪ್ಯಾಂಟ್ಸ್’ ವೆಬ್ ಸೀರಿಸ್ ಸಿದ್ದಪಡಿಸಲಾಗಿದೆ. ಡಿ.16ರಂದು ಅಮೆಜಾನ್ ಪ್ರೈಮ್ ನಲ್ಲಿ (amazon prime) ಸೀರಿಸ್ ಬಿಡುಗಡೆಯಾಗುತ್ತಿದೆ. ಬಾಲಿವುಡ್ ನಟ, ನಟಿಯರು ಈ ಸೀರಿಸ್ ನಲ್ಲಿ ಅಭಿನಯ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್ ಅವರು, ಶಿವಮೊಗ್ಗದ ಲೇಖಕ ಮತ್ತು ತಮ್ಮ ಸ್ನೇಹಿತ ಆನಂದ ಸುಬ್ಬರಾವ್ ಅವರು ‘ಹಾಫ್ ಪ್ಯಾಂಟ್ಸ್, ಫುಲ್ ಪ್ಯಾಂಟ್ಸ್’ ಪುಸ್ತಕ ಬರೆದಿದ್ದಾರೆ. ಇದನ್ನು ಆಧರಿಸಿ ಅದೇ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ (amazon prime) ವೆಬ್ ಸೀರಿಸ್ ಬಿಡುಗಡೆಯಾಗುತ್ತಿದೆ. ಮೊದಲ 8 ಎಪಿಸೋಡ್ ಗಳು ಡಿ.16ರಂದು ಬಿಡುಗಡೆಯಾಗುತ್ತಿದೆ ಎಂದರು.
amazon prime
‘ಶಿವಮೊಗ್ಗದ ಕಥೆ, ಇಲ್ಲಿಯ ತರಲೆ’
ವೆಬ್ ಸೀರಿಸ್ ಶಿವಮೊಗ್ಗದ ಕಥೆಯನ್ನು ಒಳಗೊಂಡಿದೆ. ಪುಸ್ತಕದಲ್ಲಿನ ಹೆಚ್ಚಿನ ಘಟನೆಗಳು ಶಿವಮೊಗ್ಗದಲ್ಲಿಯೇ ನಡೆದಿರುವುದರಿಂದ ಇಲ್ಲಿಯೇ ಚಿತ್ರೀಕರಣ ಮಾಡಬೇಕೆಂಬ ಒಲವಿತ್ತು. 1970-80ರ ದಶಕದಲ್ಲಿದ್ದ ಶಿವಮೊಗ್ಗದ ಚಿತ್ರಣ ಈಗ ಬದಲಾಗಿದೆ. ಆದ್ದರಿಂದ ಸಕಲೇಶಪುರ, ದೋಣಿಗಲ್ ರೈಲ್ವೆನಿಲ್ದಾಣ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು.
30 ಮಲಯಾಳಂ ಚಿತ್ರಗಳನ್ನು ನಿರ್ದೇಶಿಸಿ, 2 ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ವಿ.ಕೆ.ಪ್ರಸಾದ್ ಅವರು ವೆಬ್ ಸೀರಿಸ್ ನಿರ್ದೇಶಿಸಿದ್ದಾರೆ. ಬಾಲಿವುಡ್ ನಟ ಆಶೀಷ್ ವಿದ್ಯಾರ್ಥಿ ಲೇಖಕ ಆನಂದ್ ಅವರ ತಂದೆ ಸುಬ್ಬರಾವ್ ಅವರ ಪಾತ್ರ ಮಾಡಿದ್ದಾರೆ. ತಾಯಿಯ ಪಾತ್ರವನ್ನು ಬಾಲಿವುಡ್ ನಟಿ ಸೋನಾಲಿ ಕುಲಕರ್ಣಿ ನಿರ್ವಹಿಸಿದ್ದಾರೆ. ತಮಿಳು ಬಾಲನಟ ಅಶ್ವಥ್ ಅಶೋಕ್ ಕುಮಾರ್ ಆನಂದ್ ಅವರ ಪಾತ್ರ ಮಾಡಿದ್ದಾರೆ. ಕನ್ನಡದ ನಟರಾದ ಹರೀಶ್ ರಾಜ್, ಮ್ಯಾಜಿಕ್ ರಮೇಶ್, ಚಂದ್ರಕಾಂತ್, ತಮಿಳಿನ ಅನೇಕ ಕಲಾವಿದರು ನಟಿಸಿದ್ದಾರೆ. ಆ ಕಾಲದ ತರಲೆಗಳು ಪುಸ್ತಕದಲ್ಲಿದ್ದವು, ಅವುಗಳನ್ನು ವೆಬ್ ಸೀರಿಸ್ ನಲ್ಲಿಯು ಕಾಣಬಹುದಾಗಿದೆ ಎಂದರು.
ಶಿವಮೊಗ್ಗದವರು ನೋಡಲೇಬೇಕು
ಇದೆ ವೇಳೆ ಮಾತನಾಡಿದ ಡಾ. ನಾಗಭೂಷಣ್ ಅವರು ಶಿವಮೊಗ್ಗದ ಹುಡುಗ ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕ ಬರೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವುದು ಇದೆ ಮೊದಲು. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಈ ಪುಸ್ತಕ ಮೆಚ್ಚಿದ್ದಾರೆ. ಮೊಬೈಲ್ ಗೆ ದಾಸರಾಗಿರುವ ಈಗಿನ ಮಕ್ಕಳು ಅನೇಕ ತರಲೆಗಳನ್ನು ಮರೆತಿದ್ದಾರೆ. ಅವುಗಳನ್ನು ಮೆಲಕು ಹಾಕಲು ಈ ಪುಸ್ತಕ, ವೆಬ್ ಸೀರಿಸ್ ಅನುಕೂಲವಾಗಿದೆ. ಶಿವಮೊಗ್ಗದ ಕಥೆ ಇರುವುದರಿಂದ ಶಿವಮೊಗ್ಗದವರೆಲ್ಲ ನೋಡಲೇಬೇಕಾದ ಸೀರಿಸ್ ಇದಾಗಿದೆ ಎಂದರು.
ಇದನ್ನೂ ಓದಿ – ರೈತರಿಗೆ ಗುಡ್ ನ್ಯೂಸ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆ್ಯಪ್ ಬಿಡುಗಡೆ, ಇದನ್ನು ಬಳಸೋದು ಹೇಗೆ?
ಪ್ರಮುಖರಾದ ನಿಜಗುಣ, ಚೇತನ್, ವಿಕ್ರಂ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200